ಪ್ರತಾಪ್ ಸಿಂಹ ಗಂಡೋ ಹೆಣ್ಣೋ ಮೊದಲು ಚೆಕ್‌ಮಾಡಬೇಕು ಎಂದು, ಗಂಗಾವತಿಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಟಾಂಗ್ ಕೊಟ್ಟಿದ್ದಾರೆ.
ಪ್ರತಾಪ್ ಸಿಂಹ ಸಂಸದ ಆಗೋದಕ್ಕೆ ಲಾಯಕ್ಕಿಲ್ಲ, ಆತ ಝೀರೋ ಟ್ಯಾಲೆಂಟ್, ಯಾವುದೋ ಗಾಳಿಯಲ್ಲಿ ಜನ ಆತನಿಗೆ ವೋಟ್ ಹಾಕಿದ್ದಾರೆಂದು ಅನ್ಸಾರಿ ವ್ಯಂಗ್ಯವಾಡಿದ್ದಾರೆ.
ಪ್ರತಾಪ್ ಸಿಂಹ ಕೂಡಲೇ ಕ್ಷಮೆ ಕೇಳಬೇಕು,ಇಲ್ಲದಿದ್ದರೆ ಹೋರಾಟ ಮಾಡಲಾಗುವುದು, ಈತ ಖರ್ಗೆ ವಿರುದ್ದ ಅಷ್ಟೇ ಅಲ್ಲ,ಅನೇಕ ಕಾಂಗ್ರೆಸ್ ನಾಯಕರ ವಿರುದ್ಧ ಬೇಕಾ ಬಿಟ್ಟಿ ನಾಲಿಗೆ ಹರಿ ಬಿಡುತ್ತಾರೆ ಎಂದರು.
ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ಮುಖಂಡರೇ ಇದ್ದಾರೆ ರಾಜ್ಯದಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದ ದೊಡ್ಡ ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ, ತನಿಖಾ ಸಂಸ್ಥೆ ಇಂದ ಎಲ್ಲವನ್ನೂ ಮರೆಮಾಚೋ ಕೆಲಸ ಮಾಡ್ತಿದ್ದಾರೆ ಎಂದು ಅನ್ಸಾರಿ ಬಿ.ಜೆ.ಪಿ ಪಕ್ಷವನ್ನು ಕುಟುಕಿದ್ದಾರೆ.
PublicNext
16/11/2021 02:08 pm