ಬೆಂಗಳೂರು: ಸಕ್ರಿಯ ರಾಜಕಾರಣದಿಂದ ದೂರವಿರುದ ನಟಿ ರಮ್ಯಾ ದಿವ್ಯಸ್ಪಂದನ ಆಗಾಗ್ಗೆ ಸಮಾಜದ ಆಗು ಹೋಗುಗಳಿಗೆ ಪ್ರತಿಕ್ರಿಯಿಸುತ್ತಿರುತ್ತಾರೆ. ಅದರಂತೆ ಇಂದು ಹಿಂದೂ ಧರ್ಮ ಮತ್ತು ಹಿಂದುತ್ವ ಒಂದೇ ಅಲ್ಲ ಎಂದು ಪ್ರತಿಪಾದಿಸಿ ಚರ್ಚೆಗೆ ಕಾರಣರಾಗಿದ್ದಾರೆ.
ಆರ್‌ಎಸ್‌ಎಸ್ ಹಾಗೂ ಬಿಜೆಪಿ ಸಿದ್ಧಾಂತದ ವಿರುದ್ಧ ಕೆಲ ದಿನಗಳ ಹಿಂದಷ್ಟೇ ಹರಿಹಾಯ್ದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ಹಿಂದೂ ಧರ್ಮ ಹಾಗೂ ಹಿಂದುತ್ವ ಎಂಬುವುದು ಬೇರೆಬೇರೆ. ಬಿಜೆಪಿ- ಆರ್‌ಎಸ್‌ಎಸ್ ಸಿದ್ಧಾಂತವು ದೇಶದಲ್ಲಿ ದ್ವೇಷಹರಡುತ್ತಿದೆ" ಎಂದಿದ್ದರು.
ಈ ಬೆನ್ನಲ್ಲೇ ನಟಿ ರಮ್ಯಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ, "ಹಿಂದೂ ಧರ್ಮ ಹಾಗೂ ಹಿಂದುತ್ವ ಬೇರೆಬೇರೆ. ಹಿಂದೂ ಧರ್ಮ ಎನ್ನುವುದು ರಾಜಕೀಯವಲ್ಲ. ಆದರೆ ಹಿಂದುತ್ವ ಎನ್ನುವುದು ರಾಜಕೀಯ. ಹಿಂದೂ ಧರ್ಮ ಎಂದರೆ ಎಲ್ಲರ ಒಳಗೊಳ್ಳುವಿಕೆ ಹಾಗೂ ಎಲ್ಲರ ಬಗ್ಗೆಯೂ ಇರುವ ಪ್ರೀತಿ. ಇದಕ್ಕೆ ವಿರುದ್ಧವಾಗಿದ್ದು ಹಿಂದುತ್ವ. ನಿಜವಾದ ಹಿಂದೂಗಳಿಗೆ ಈ ವ್ಯತ್ಯಾಸ ತಿಳಿದಿರಲಿದೆ" ಎಂದು ಪೋಸ್ಟ್ ಮಾಡಿದ್ದಾರೆ. ರಮ್ಯಾ ಅವರ ಈ ಪೋಸ್ಟ್ ಅನ್ನು ವಿರೋಧಿಸಿ ಹಾಗೂ ಬೆಂಬಲಿಸಿ ಸಾವಿರಾರು ಜನರು ಪ್ರತಿಕ್ರಿಯೆ ನೀಡಿದ್ದಾರೆ.
PublicNext
14/11/2021 07:57 pm