ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತಾಂತರ ನಿಷೇಧ ಕಾಯ್ದೆ ಜಾರಿ ಆಗಲೇಬೇಕು:ಪ್ರಮೋದ್ ಮುತಾಲಿಕ್ ಆಗ್ರಹ

ಬೆಂಗಳೂರು:ರಾಜ್ಯದಲ್ಲಿ ಮತಾಂತರ ಜಾಸ್ತಿ ಆಗುತ್ತಿದೆ. ಇದನ್ನ ತಡೆಯಲು ಸರ್ಕಾರ ಮುಂದಾಗಿದೆ ಅಂತ ಗೊತ್ತಾಗಿದ್ದೇ ತಡ. ಪಾದ್ರಿಗಳು ಸಿಎಂ ಬಸವರಾಜ್ ಬೊಮ್ಮಾಯಿ ಅವರ ಭೇಟಿಗೆ ಬರುತ್ತಿದ್ದಾರೆ.ಇದು ಸರಿ ಅಲ್ಲವೇ ಅಲ್ಲ ಎಂದು ಶ್ರೀರಾಮ ಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲೇಬೇಕು ಅಂತಲೆ ಇಂದು ಸ್ವಾಮೀಜಿಗಳು ಮತ್ತು ಪ್ರಮೋದ್ ಮುತಾಲಿಕ್ ನಿಯೋಗ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನ ಭೇಟಿ ಆಗಲು ಬಂದಿದ್ದ ಪ್ರಮೋದ್ ಮುತಾಲಿಕ್ ಹೀಗೆ ಮಾಧ್ಯಮಕ್ಕೆ ಮಾತನಾಡಿದ್ದಾರೆ.

ಮತಾಂತರ ಅನ್ನೋದು ಬ್ರಿಟಿಷರಿಂದಲೇ ಬಂದಿರೋದು.ಇದನ್ನ ತಡೆಯಲೇಬೇಕು. ರಾಜ್ಯ ಸರ್ಕಾರ ಮತಾಂತ ನಿಷೇಧ ಕಾಯ್ದೆ ಜಾರಿಗೆ ತರಬೇಕು. ಈ ಬಗ್ಗೆ 50 ಸ್ವಾಮೀಜಿಗಳು ಸಿಎಂ. ಬಳಿ ಮನವಿ ಮಾಡಲಿದ್ದಾರೆ.ಮಾದಾರ ಚನ್ನಯ್ಯ, ಸೇವಾಲಾಲ್ ಸ್ವಾಮೀಜಿ, ಸಿದ್ದಲಿಂಗ ಸ್ವಾಮಿ ಸೇರಿದಂತೆ ಹಲವರು ಬರಲಿದ್ದಾರೆ ಎಂದು ಮುತಾಲಿಕ್ ಹೇಳಿದ್ದಾರೆ.

ಒಂದು ವೇಳೆ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರದೇ ಇದ್ದರೇ ಸ್ವಾಮೀಜಿಗಳು ನೇತೃತ್ವದಲ್ಲಿ ಪ್ರತಿಭಟನೆ ಮಾಡುತ್ತೇವೆ.ಬೇರೆ ಬೇರೆ ಮಂತ್ರಿಗಳ ಮೇಲೂ ಒತ್ತಡ ತರುತ್ತವೆ ಎಂದಿದ್ದಾರೆ ಮುತಾಲಿಕ್.

ಬಿಟ್ ಕಾಯಿನ್ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ಆಗಬೇಕು. ಯಾರೇ ಇದ್ದರೂ ಸರಿಯೇ ಅವರಿಗೆ ಶಿಕ್ಷೆ ಆಗಬೇಕು. ಸದ್ಯ ಪರಸ್ಪರ ದೂಷಣೆ ನಡೆಯುತ್ತಿದೆ. ಸತ್ಯ ಏನೂ ಅನ್ನೋದು ಹೊರಬರಬೇಕು. ಯುವ ಜನತೆಯನ್ನ ಹಾಳು ಮಾಡ್ತಿರೋ ಡ್ರಗ್ಸ್ ಮಾಫಿಯಾ ರೀತಿಯಲ್ಲಿಯೇ ಇದು ಮುಚ್ಚಿ ಹೋಗಬಾರದು.ಸಾಮಾಜಿಕ ಕಳಕಳಿಯಿಂದಲೇ ಬಿಟ್ ಕಾಯಿನ್ ಪ್ರಕರಣ ತನಿಖೆ ಆಗಬೇಕು ಅಂತಲೇ ಹೇಳಿದ್ದಾರೆ ಮುತಾಲಿಕ್ ಹೇಳಿದ್ದಾರೆ.

Edited By : Nagesh Gaonkar
PublicNext

PublicNext

12/11/2021 05:36 pm

Cinque Terre

43.09 K

Cinque Terre

3

ಸಂಬಂಧಿತ ಸುದ್ದಿ