ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಎಲ್ಲ ರೇಟ್ ಕಡಿಮೆಯಾಗುತ್ತೆ ಕಾದು ನೋಡಿ: ಸಂಸದ ಸಿದ್ಧೇಶ್ವರ್

ದಾವಣಗೆರೆ: ಸಿಲಿಂಡರ್ ಅಷ್ಟೇ ಅಲ್ಲ ಎಲ್ಲಾ ಅಗತ್ಯ ವಸ್ತುಗಳ ದರ ಕಡಿಮೆ ಆಗಲಿದೆ. ಸ್ವಲ್ಪ ಕಾದು ನೋಡಿ ಎಂದು ದಾವಣಗೆರೆ ಸಂಸದ ಜಿ.ಎಂ ಸಿದ್ಧೇಶ್ವರ್ ಹೇಳಿದ್ದಾರೆ.

ಹರಪನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪೆಟ್ರೋಲ್, ಡಿಸೇಲ್ ಇನ್ನಷ್ಟು ಕಡಿಮೆ ಆಗಲಿದೆ. ಸಿಲಿಂಡರ್ ಕೂಡ ಕಡಿಮೆಯಾಗಲಿದೆ. ಇದರೊಂದಿಗೆ ಜಿಂಕ್, ಕಬ್ಬಿಣ, ಸಿಮೆಂಟ್ ಸೇರಿ ಎಲ್ಲಾ ದರಗಳು ಕಡಿಮೆಯಾಗಲಿವೆ. ಕೋವಿಡ್ ನಿಯಂತ್ರಣಕ್ಕೆ ಬಂದು ಆದಾಯ ಹೆಚ್ಚಾಗಿದೆ. ಈ ಹಿನ್ನಲೆ ಎಲ್ಲಾ ವಸ್ತುಗಳ ದರ ಕಡಿಮೆ ಮಾಡ್ತೇವೆ ಎಂದ ಸಿದ್ಧೇಶ್ವರ್ ಜನತೆಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಉಪಚುನಾವಣೆಗೂ ತೈಲ ಬೆಲೆ ಇಳಿಕೆಗೂ ಸಂಬಂಧವಿಲ್ಲ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗಲೂ ಬೆಲೆ ಹೆಚ್ಚಳವಾಗಿತ್ತು. ಯಾವುದೋ ಒಂದು ಕ್ಷೇತ್ರ ಸೋತ್ತಿದ್ದರ ಎಫೆಕ್ಟ್ ಇದಲ್ಲ. ಸರ್ಕಾರ ತೀರ್ಮಾನ ಮಾಡಿದೆ. ಅಗತ್ಯ ವಸ್ತುಗಳ ಬೆಲೆ ಇಳಿಕೆ ಆಗಲಿದೆ ಎಂದು ಜಿ.ಎಂ ಸಿದ್ಧೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Edited By : Manjunath H D
PublicNext

PublicNext

06/11/2021 03:53 pm

Cinque Terre

39.76 K

Cinque Terre

5

ಸಂಬಂಧಿತ ಸುದ್ದಿ