ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈ ಎಲೆಕ್ಷನ್ ಸಮರ : ನಾನು ಜಾತಿವಾದಿ ಏನೀಗ?ಬಿಜೆಪಿಗೆ ಸಿದ್ದು ತಿರುಗೇಟು

ಬೆಂಗಳೂರು : ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಬೈ ಎಲೆಕ್ಷನ್ ನಲ್ಲಿ ಮಾತಿನ ಮಹಾಯುದ್ದ ಮುಂದುವರೆದಿದೆ.

ಉಪಚುನಾವಣೆ ಕಣ ರಂಗೇರಿದೆ, ರಾಜಕೀಯ ನಾಯಕರು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಕಸರತ್ತು ನಡೆಸಿದ್ದಾರೆ. ಇದರ ಮಧ್ಯೆ ವೈಯಕ್ತಿಕ ಟೀಕೆಗಳನ್ನು ಮುಂದುವರೆಸಿ,ಇದೀಗ ಜಾತಿ ಜಗಳಕ್ಕೆ ಇಳಿದಿದ್ದಾರೆ.

ಸಿದ್ದರಾಮಯ್ಯ ಅವರನ್ನು ಜಾತಿವಿಭಜಕ ಎಂದು ಕರೆದ ಬಿಜೆಪಿಗೆ ಸ್ವತಃ ಸಿದ್ದರಾಮಯ್ಯ ಅವರು ತಿರುಗೇಟು ಕೊಟ್ಟಿದ್ದು, ನಾನು ಜಾತಿವಾದಿ ಏನೀಗ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಟ್ವೀಟ್ ಗೆ ಸರಣಿ ಟ್ವೀಟ್ ಮಾಡುವ ಮೂಲಕ ತಿರುಗೇಟು ಕೊಟ್ಟಿರುವ ಸಿದ್ದು, ಶೋಷಿತ ಜಾತಿಗಳು ತಮಗಾಗಿರುವ ಅನ್ಯಾಯವನ್ನು ಹೇಳಿಕೊಳ್ಳಲು ಸಂಘಟಿತರಾಗಿವುದು ತಪ್ಪಲ್ಲ, ಅದು ಜಾತಿವಾದವೂ ಅಲ್ಲ. ಅಂತಹ ಜಾತಿ ಸಮಾವೇಶಗಳಲ್ಲಿ ಭಾಗವಹಿಸುವುದು ಜಾತಿವಾದವಾದರೆ.. ಹೌದು, ನಾನು ಜಾತಿವಾದಿ..

ಏನೀಗ..? ಎಂದಿದ್ದಾರೆ.

ಸಿದ್ದು ಮಾಡಿದ ಸರಣಿ ಟ್ವಿಟ್ ಹೀಗಿವೆ ನೋಡಿ..

Edited By : Nirmala Aralikatti
PublicNext

PublicNext

26/10/2021 09:55 am

Cinque Terre

56.01 K

Cinque Terre

10

ಸಂಬಂಧಿತ ಸುದ್ದಿ