ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇಲ್ಲಿಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದೆ. ಕರ್ನಾಟಕ ಸರ್ಕಾರ ನಾಲಾಯಕ್ ಸರ್ಕಾರ ಅಂತಲೇ ಘೋಷಣೆ ಕೂಗಿ ಜೈ ಮಹಾರಾಷ್ಟ್ರ ಅಂತಲೂ ಹೇಳಿದ್ದಾರೆ ಪ್ರತಿಭಟನೆ ನಿರತರು.
ದಾಖಲೆಗಳನ್ನ ಮರಾಠಿ ಭಾಷೆಯಲ್ಲಿ ನೀಡಬೇಕು ಅನ್ನೋದು ಸೇರಿದಂತೆ,ಗಡಿ ಭಾಗದಲ್ಲಿರೋ ಬೆಳಗಾವಿ,ಖಾನಾಪುರ,ಕಾರವಾರ,ನಿಪ್ಪಾಣಿ,ಬೀದರ್,ಭಾಲ್ಕಿ ಸೇರಿದಂತೆ ಗಡಿಭಾಗದ ಈ ಎಲ್ಲ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಅನ್ನೋದು ಸೇರಿದಂತೆ ವಿವಿಧ ಬೇಡಿಕೆಯನ್ನ ಈಡೇರಿಸುವಂತೆ
ಪ್ರತಿಭಟನೆ ಮಾಡಿದ್ದಾರೆ. ಅಲ್ಪ ಸಂಖ್ಯಾತರಾದ ಮರಾಠಿ ಭಾಷಿಕರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು, ರಾಜ್ಯ ಸರ್ಕಾರ ನಾಲಾಯಿಕ್ ಸರ್ಕಾರ ಅಂತಲೂ ಘೋಷಣೆ ಕೂಗಿ ಪ್ರತಿಭಟಿಸಿದ್ದಾರೆ. ಮೆರವಣಿಗೆಗೆ ಪರವಾನಗಿ ಇಲ್ಲದೇ ಇದ್ದರೂ ಎಂಇಎಸ್ ರಸ್ತೆಗಳಿದು ಹೋರಾಟ ಮಾಡಿದೆ. ಪೊಲೀಸರ ಜೊತೆಗೆ ವಾಗ್ವಾದಕ್ಕೂ ಇಳಿದಿತ್ತು ಎಂಇಎಸ್.
PublicNext
25/10/2021 07:43 pm