ವಿಜಯಪುರ: ದೇಶದಲ್ಲಿ ಈಗ ಇರೋದು ನೆಹರು ಕಾಂಗ್ರೆಸ್ ಅಲ್ಲ, ಇದು ವ್ಯಾಪಾರ ಮಾಡೋ ಡೂಬ್ಲಿಕೇಟ್ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷ ಎಂತದ್ದು ಎಂಬುದು ಅದರ ಪದಾಧಿಕಾರಿಗಳಿಂದಲೇ ಗೊತ್ತಾಗಿದೆ ಎಂದು ಜೆಡಿಎಸ್ ನಾಯಕ ಎಚ್.ಡಿ ರೇವಣ್ಣ ಹೇಳಿದ್ದಾರೆ.
ಸಿಂದಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿಯವರು ದೇವೇಗೌಡರ ಸಾಧನೆ ಏನು ಎಂದು ಕೇಳುತ್ತಿದ್ದಾರೆ. ದೇವೇಗೌಡರ ಸಾಧನೆ ಏನು ಅನ್ನೋದರ ಬಗ್ಗೆ ಮೋದಿ ಬಳಿ ಹೋಗಿ ಪುಸ್ತಕ ಓದಿ ನೋಡಲಿ. ಅಲ್ಪಸಂಖ್ಯಾತರ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಯಾವ ಕಾಳಜಿಯೂ ಇಲ್ಲ. ಅಲ್ಪಸಂಖ್ಯಾತರಿಗೆ ಸಹಾಯ ಮಾಡಿದ್ದು ದೇವೇಗೌಡ ಹಾಗೂ ಕುಮಾರಸ್ವಾಮಿ. ಮುಸ್ಲಿಂ ಸಮುದಾಯದ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ಏನು ನೈತಿಕತೆ ಇದೆ?
ದಿನ ಬೆಳಗಾದ್ರೆ ಸಾಕು ಕಾಂಗ್ರೆಸ್ ನಾಯಕರು ಜೆಡಿಎಸ್ ಗೆ ಬೈಕೊಂಡು ತಿರುಗಾಡ್ತಾರೆ. ಎಂ ಸಿ ಮನಗೂಳಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಸಿಂದಗಿ ಜನ ಜೆಡಿಎಸ್ ಪಕ್ಷಕ್ಕೆ ಮತ ಹಾಕಬೇಕು ಎಂದು ರೇವಣ್ಣ ಮನವಿ ಮಾಡಿದರು.
PublicNext
24/10/2021 09:42 pm