ಮೈಸೂರು: ರಾಜ್ಯದಲ್ಲಿ ಸಿಂದಗಿ-ಹಾನಗಲ್ ಉಪ ಚುನಾವಣೆ ಎಲ್ಲರಿಗೂ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ಬಿಜೆಪಿ ಅಬ್ಬರದ ಪ್ರಚಾರ ಮಾಡುತ್ತದೆ.ಜೆಡಿಎಸ್ ನ ಇಡೀ ಪರಿವಾರವೇ ಪ್ರಚಾರಕ್ಕಾಗಿ ಆಯಾ ಕ್ಷೇತ್ರದಲ್ಲಿ ಬೀಡುಬಿಟ್ಟಿದೆ. ಕಾಂಗ್ರೆಸ್ ನ ದಿಗ್ಗಜ ಮುಖಂಡರೆಲ್ಲ ರೊಚ್ಚಿಗೆದ್ದು ರೋಡಿಗಿಳಿದ್ದಾರೆ. ಪ್ರಚಾರದ ಜೊತೆಗೆ ವೈಯಕ್ತಿಕ ಮತ್ತು ರಾಜಕೀಯ ವಿಚಾರಗಳನ್ನ ನಾಯಕರು ಟ್ವಿಟರ್ ನಲ್ಲಿ ಹಾಕಿ ಇಡೀ ಟ್ವಿಟರ್ ಲೋಕ ರಣಾಂಗಣವಾಗಿದೆ. ಆದರೆ ಈಗ ಮೈಸೂರಿನಲ್ಲಿ ಕಾಂಗ್ರೆಸ್ ಮುಖಂಡ ಎಂ.ಲಕ್ಷ್ಮಣ ಬಿಜೆಪಿಯಲ್ಲಿರೋ 13 ರಾಜಕಾರಣಿಗಳ ಲೈಂಗಿಕ ಕೇಸ್ ನ ಬಗ್ಗೆ ಸವಿವರ ಕೊಟ್ಟು ಕಠುವಾಗಿಯೇ ಟೀಕಿಸಿದ್ದಾರೆ.
ಕಾಂಗ್ರೆಸ್ ನಲ್ಲಿ ಏನೆಲ್ಲ ಇದೆ ಅಂತ ಬಿಜೆಪಿ ಟೀಕಿಸುತ್ತದೆ. ಆರ್ ಎಸ್.ಎಸ್.ವಿಷಯ ಇಟ್ಟುಕೊಂಡು ಕುಮಾರ್ ಸ್ವಾಮಿ ಬಿಜೆಪಿಯನ್ನ ಟಾರ್ಗೆಟ್ ಮಾಡಿದ್ದಾರೆ. ಈಗ ಮೈಸೂರಿನಲ್ಲಿ ಕಾಂಗ್ರೆಸ್ ನ ವಕ್ತಾರ ಎಂ.ಲಕ್ಷ್ಮಣ ಬಿಜೆಪಿಯಲ್ಲಿರೋ ರಾಜಕಾರಣಿಗಳ ವೈಯಕ್ತಿಕ ಕೇಸ್ ಗಳನ್ನ ಇಟ್ಟುಕೊಂಡು ಜನ್ಮ ಜಾಲಾಡಿದ್ದಾರೆ.
ದೇಶದಲ್ಲಿರೋ ಬಿಜೆಪಿಯ 137 ರಾಜಕಾರಣಿಗಳು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಅವರಲ್ಲಿ 13 ಜನ ಕರ್ನಾಟಕದಲ್ಲಿಯೇ ಇರೋದು. ಹೀಗೆ ಹೇಳಿರೋ ಕಾಂಗ್ರೆಸ್ ಮುಖಂಡ, ಯಾವ ವರ್ಷದಲ್ಲಿ ಯಾರು ಯಾವ ಕೇಸ್ ನಲ್ಲಿ ಜಾಮೀನ ಮೇಲೆ ಹೊರ ಬಂದಿದ್ದಾರೆ ಅಂತಲೂ ವಿವರವಾಗಿಯೇ ಹೇಳಿದ್ದಾರೆ. ಆ ವಿವರ ಹೀಗಿದೆ ನೋಡಿ.
ಬಸವರಾಜ್ ಯತ್ನಾಳ್,ಅರವಿಂದ್ ನಿಂಬಾವಳಿ ಮೇಲೆ ಸಲಿಂಗ ಕಾಮದ ಕೇಸ್ ಇದೆ. ನರ್ಸ್ ಕೇಸ್ ಅಲ್ಲಿ ರೇಣುಕಾ ಚಾರ್ಯ,ರಘು ಪತಿ ಭಟ್ ಪತ್ನಿ ಕೊಲೆ ಪ್ರಕರಣ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ಸಿ.ಸಿ.ಪಾಟೀಲ್,ಕಳಕಪ್ಪ ಬಂಡಿ,ಪ್ರತಾಪ್ ಸಿಂಹ, ಸದಾನಂದ ಗೌಡರು, ನಳೀನ ಕುಮಾರ್ ಕಟೀಲ್, ಹಾಲಪ್ಪ ಹೀಗೆ ಇವರೆಲ್ಲರ ಪ್ರಕರಣದ ಒಟ್ಟು ಚಿತ್ರಣ ಕೊಟ್ಟು ತಮ್ಮ ಪಕ್ಷವನ್ನ ಟೀಕಿಸಿದವ್ರಿಗೆ ಎಂ.ಲಕ್ಷ್ಮಣ ತಿರುಗೇಟುಕೊಟ್ಟಿದ್ದಾರೆ
PublicNext
24/10/2021 08:43 pm