ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಸಿಕೆ ಕೊಟ್ಟಿಲ್ವೇ? ತೈಲ ಬೆಲೆ ಏರಿಕೆ ಸಮರ್ಥಿಸಿಕೊಂಡ ಸಚಿವ

ಹೊಸದಿಲ್ಲಿ: ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆಯಾಗಿರುವ ಬೆನ್ನಲ್ಲೇ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ದರ ಏರಿಕೆ ಸಮರ್ಥಿಸಿಕೊಂಡಿರುವ ಪರಿ ನಿಜಕ್ಕೂ ಅಚ್ಚರಿಯಾಗಿದೆ. ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸಲಾಗುವ ಸುಂಕ ಕೋವಿಡ್ ಸಂಕಷ್ಟದ ಸಮಯದಲ್ಲಿ ಕೋಟ್ಯಂತರ ಜನರಿಗೆ ಉಚಿತ ಕೋವಿಡ್ ಲಸಿಕೆಗಳು, ಊಟ ಮತ್ತು ಅಡುಗೆ ಅನಿಲವನ್ನು ಒದಗಿಸುವ ಸರಕಾರಿ ಕಾರ್ಯಕ್ರಮಗಳನ್ನು ಬೆಂಬಲಿಸಲು ಸಹಾಯ ಮಾಡಿದೆ” ಎಂದಿದ್ದಾರೆ.

ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಹರ್ ದೀಪ್ ಸಿಂಗ್ ನಮ್ಮ ದೇಶದಲ್ಲಿ ನಾವು ಸರಳವಾದ ರಾಜಕೀಯ ನಿರೂಪಣೆ ಪಡೆಯಬಹುದು, ಸುಂಕ ಕಡಿಮೆ ಮಾಡಿ ಎಂದು ಹೇಳಬಹುದು. ಆದರೆ, ಪ್ರತೀ ಬಾರಿ ಅದರದ್ದೇ ಆದ ಕಾರಣಕ್ಕೆ ಬೆಲೆ ಏರಿಕೆ ಆಗುತ್ತಿದೆ” ಎಂದರು. ನಾವು 1 ಬಿಲಿಯನ್ ಕೋವಿಡ್ ಲಸಿಕೆಗಳನ್ನು ಪೂರೈಸಿದ್ದೇವೆ, ಕೋವಿಡ್ ಸಮಯದಲ್ಲಿ 90 ಕೋಟಿ ಜನರಿಗೆ ಮೂರು ಹೊತ್ತು ಆಹಾರ ದೊರಕುವಂತೆ ಮಾಡಿದ್ದೇವೆ. ಉಜ್ವಲಾ ಯೋಜನೆಯ ಮೂಲಕ 8 ಕೋಟಿ ಜನರಿಗೆ ಉಚಿತ ಎಲ್ ಪಿಜಿ ಸಿಲಿಂಡರ್ ಒದಗಿಸಿದ್ದೇವೆ” ಎಂದರು.

”ತೆರಿಗೆ ಹಣವನ್ನು ರಸ್ತೆಗಳ ನಿರ್ಮಾಣಕ್ಕೆ , ಕಲ್ಯಾಣ ಕಾರ್ಯಕ್ಕೆ ಬಳಕೆ ಮಾಡುತ್ತೇವೆ. ಇದಕ್ಕಿಂತ ಹೆಚ್ಚಿನ ವಿವರಗಳನ್ನು ನೀಡಲು, ನಾನೇನು ಹಣಕಾಸು ಸಚಿವನಲ್ಲ,ಪೆಟ್ರೋಲ್ ಮೇಲಿನ ತೆರಿಗೆ ಇಳಿಸುವುದು ಕಷ್ಟ, ಎಂದರು.

Edited By : Nirmala Aralikatti
PublicNext

PublicNext

23/10/2021 12:29 pm

Cinque Terre

60.79 K

Cinque Terre

23

ಸಂಬಂಧಿತ ಸುದ್ದಿ