ಕೋಲಾರ: ಈ ಮೊದಲು ಕೆಜಿ ಗಟ್ಟಲೆ ದ್ರಾಕ್ಷಿ ತಿನ್ನುತ್ತಿದ್ದೆ. ಆದರೆ ರೈತರು ಬಳಸುವ ರಾಸಾಯನಿಕವನ್ನ ಕಣ್ಣಾರೆ ಕಂಡು ದ್ರಾಕ್ಷಿಯನ್ನೇ ತಿನ್ನೋದು ಬಿಟ್ಟೆ ಎಂದು ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕೋಲಾರದ ಪ್ರವಾಸ ಕೈಗೊಂಡಿದ್ದ ಶೋಭಾ ಕರಂದ್ಲಾಜೆ, ಇಲ್ಲಿಯ ಕೆವಿಕೆ ಕಟ್ಟಡ ಉದ್ಘಾಟಿಸಿದರು. ಈ ವೇಳೆನೆ ಮಾತನಾಡಿದ ಶೋಭಾ ಅವ್ರು, ನಾನು ಕೆಜಿಗಟ್ಟಲೆ ದ್ರಾಕ್ಷಿ ತಿನ್ನುತ್ತಿದ್ದೆ. ಆದರೆ ದೊಡ್ಡಬಳ್ಳಾಪುರದ ರೈತರ ತೋಟಕ್ಕೆ ಒಮ್ಮೆ ಭೇಟಿ ಕೊಟ್ಟಿದ್ದೆ.ಆಗ ಅವರು ರಾಸಾಯನಿಕ ಬಳಸೋದನ್ನ ನಾನೇ ನೋಡಿದೆ. ಅಂದಿನಿಂದಲೇ ನಾನು ದ್ರಾಕ್ಷಿ ಸೇವಿಸೋದನ್ನ ಬಿಟ್ಟೆ ಎಂದಿದ್ದಾರೆ ಶೋಭಾ ಕರಂದ್ಲಾಜೆ.
PublicNext
22/10/2021 10:40 pm