ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಳ್ಳ ಇತರರನ್ನು ನಂಬೋದಿಲ್ಲ: ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಬಿಎಸ್‌ವೈ

ವಿಜಯಪುರ: ಕೇಂದ್ರ ಸರ್ಕಾರದಿಂದ ಯಾವ ಅನುದಾನಗಳನ್ನು ತರಬೇಕಿತ್ತೋ ಅದನ್ನೆಲ್ಲ ತಂದಿದ್ದೇವೆ. ಈ ನಿಟ್ಟಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಕೇಂದ್ರ ನಾಯಕರೊಂದಿಗೆ ಸಮನ್ವಯತೆ ಕಾದುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ವಿಜಯಪುರದಲ್ಲು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ‌ ಬಿಜೆಪಿಗೆ ಧಮ್ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಒಬ್ಬ ಮಾಜಿ ಸಿಎಂ ಆಗಿ ಹೀಗೆ ಮಾತನಾಡಬಾರದು. ಕೇಂದ್ರದಿಂದ ಏನು ಹಣ ತರಬೇಕೋ ನಾವು ತಂದಿದ್ದೀವಿ. ಕರ್ನಾಟಕವನ್ನ ಮಾದರಿ ರಾಜ್ಯವನ್ನಾಗಿ ಮಾಡ್ತೇವೆ. ಕೇಂದ್ರದ ಎಲ್ಲ ಸಚಿವರನ್ನ ಭೇಟಿ ಮಾಡಿ ಸಿಎಂ ಅನುದಾನ ತರುವ ಕೆಲಸ ಮಾಡ್ತಿದ್ದಾರೆ. ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ತಂದ ಹಣಕ್ಕಿಂದ 10 ಪಟ್ಟು ಹೆಚ್ಚು ಹಣ ತರುತ್ತೇವೆ ಎಂದು ತಿಳಿಸಿದ್ದಾರೆ.

ಚುನಾವಣೆ ಗೆಲ್ಲಲು ಬಿಜೆಪಿಯಿಂದ ಹಣ ಹಂಚಿಕೆ ಮಾಡಲಾಗುತ್ತಿದೆ ಎಂಬ ಸಿದ್ದರಾಮಯ್ಯ ಹಾಗೂ ಡಿಕೆಶಿ ಆರೋಪಕ್ಕೆ ಉತ್ತರಿಸಿದ ಯಡಿಯೂರಪ್ಪ, "ಯಾರು ತಾನು ಕಳ್ಳ, ಅವನು ಬೇರೆಯವನನ್ನ ನಂಬೋದಿಲ್ಲ." ವಿನಾಕಾರಣ ಆರೋಪ ಮಾಡೋದು ಶೋಭೆ ತರೋದಿಲ್ಲ. ಯಾರು ಯಾರಿಗೆ ಹಣ ಕೊಡ್ತಿದ್ದಾರೆ ಅನ್ನೋದನ್ನ ಹೇಳಿ.

ಸುಳ್ಳು ಆರೋಪದಿಂದ ಲಾಭ ಇಲ್ಲ. ಹಣ ಹಂಚಿ ಅಧಿಕಾರಕ್ಕೆ ಬಂದವರು ನೀವು. ಕಾಂಗ್ರೆಸ್‌ಗೆ ಸೋಲಿನ ಭೀತಿ ಇದೆ. ಹೀಗಾಗಿ ಈ ರೀತಿ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ ಎಂದು ಯಡಿಯೂರಪ್ಪ ಕಾಂಗ್ರೆಸ್ ನಾಯಕರಿಗೆ ತಿವಿದಿದ್ದಾರೆ.

Edited By : Nagesh Gaonkar
PublicNext

PublicNext

21/10/2021 06:19 pm

Cinque Terre

59.44 K

Cinque Terre

1

ಸಂಬಂಧಿತ ಸುದ್ದಿ