ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ: ಸ್ಪರ್ಧಿಸೋ ಬಗ್ಗೆ ಪ್ರಿಯಾಂಕಾ ಗಾಂಧಿ ಏನ್ ಹೇಳ್ತಾರೆ

ಪ್ರಿಯಾಂಕಾ ಗಾಂಧಿ ವಾದ್ರಾ ಇವತ್ತು ತಮ್ಮ ಒಂದು ನಿರ್ಧಾರ ಘೋಷಿಸಿದ್ದಾರೆ. ಆ ನಿರ್ಧಾರ ರಾಜಕೀಯವಾಗಿಯೇ ಇದೆ. ಅದು ಚುನಾವಣೆ ಸ್ಪರ್ಧಿಸೋ ವಿಚಾರಕ್ಕೆ ಸಂಬಂಧಿಸಿದ್ದು. ಪತ್ರಕರ್ತ ಕೇಳಿದ ಆ ಪ್ರಶ್ನೆಗೆ ಹಿಂದಿಯಲ್ಲಿಯೇ ಆನ್ಸರ್ ಮಾಡಿದ ಪ್ರಿಯಾಂಕಾ ಉತ್ತರ ಹೇಗಿತ್ತು. ಏನ್ ಅದು ಹೇಳ್ತೀವಿ ನೋಡಿ.

ಪ್ರಿಯಾಂಕಾ ಗಾಂಧಿ ವಾದ್ರಾ ಸದ್ಯ ಲಖೀಂಪುರ ಘಟನೆಯನ್ನ ಪ್ರತಿಭಟಿಸುತ್ತಲೇ ಸುದ್ದಿಯಲ್ಲಿದ್ದಾರೆ. ಇದರಿಂದ ಸಹಜವಾಗಿಯೇ ಇದು ಚುನಾವಣೆಯ ತಂತ್ರ.ಮುಂದಿನ ಚುನಾವಣೆಗೆ ಸ್ಪರ್ಧಿಸಲು ಈ ಐಡಿಯಾ ಮಾಡ್ತಿದ್ದಾರೆ ಅಂತಲೇ ಎಲ್ಲರೂ ಲೆಕ್ಕ ಹಾಕುತ್ತಾರೆ. ಆ ಪ್ರಶ್ನೆಗೆ ಉತ್ತರ ಅನ್ನೋ ಅರ್ಥದಲ್ಲಿಯೆ ಪ್ರಿಯಾಂಕಾ ಈಗ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಮುಂಬರೋ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೀರಾ ? ಅದು ಅಮೇಥಿನಾ ಇಲ್ಲವೇ ರಾಯಬರೇಲಿನಾ ? ಅಂತ ANI ಸುದ್ದಿ ಸಂಸ್ಥೆಯ ವರದಿಗಾರ ಕೇಳಿದ ಪ್ರಶ್ನೆಗೆ, ಪ್ರಿಯಾಂಕಾ ನಗ್ತಾ ನಗ್ತಾನೇ ಉತ್ತರ ಕೊಟ್ಟಿದ್ದಾರೆ. ಸದ್ಯಕ್ಕೆ ಅದರ ಬಗ್ಗೆ ಯೋಚನೆ ಮಾಡಿಯೇ ಇಲ್ಲ. ಮುಂದೊಂದಿನ ನಿಲ್ಲೋದು ಇದ್ದೇ ಇದೆ. ಅದನ್ನ ಆಗಲೇ ಹೇಳುತ್ತೇನೆ ಅಂತ ಮಾತು ಮುಗಿಸಿದ್ದಾರೆ.

Edited By :
PublicNext

PublicNext

19/10/2021 07:35 pm

Cinque Terre

53.32 K

Cinque Terre

2

ಸಂಬಂಧಿತ ಸುದ್ದಿ