ಬೆಂಗಳೂರು: ಸಚಿವ ಶ್ರೀರಾಮುಲು ಕಚೇರಿಯಲ್ಲಿ ಸಿಎಂ ಫೋಟೋಗೆ ಜಾಗವೇ ಇಲ್ಲವಂತೆ ಹೌದು ಗಾಂಧೀಜಿ, ರಾಷ್ಟ್ರಪತಿ, ಪ್ರಧಾನಿ ಮೋದಿ ಸಾಲಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಫೋಟೋವನ್ನು ಕಚೇರಿಯಲ್ಲಿ ಹಾಕಲಾಗಿದೆ .ಆದರೆ ನಿಯಮಾವಳಿ ಪ್ರಕಾರ ಹಾಕಬೇಕಿದ್ದ ಸಿಎಂ ಬೊಮ್ಮಾಯಿ ಫೋಟೋ ಬದಲಾಗಿ ಸಚಿವರಾಗಿ ರಾಮುಲು ಪ್ರಮಾಣವಚನ ಸ್ವೀಕಾರ ಮಾಡಿದ ಫೋಟೋವನ್ನು ಕಚೇರಿಯ ಸಿಬ್ಬಂದಿಗಳು ಹಾಕಿದ್ದಾರೆ.
ಡಿಸಿಎಂ ಸ್ಥಾನ ಕೊಡದ ಸಿಎಂ ಮೇಲಿನ ಮುನಿಸೋ? ಯಡಿಯೂರಪ್ಪ ಮೇಲೆ ಮಾತ್ರ ನಿಷ್ಠೆಯೋ?
ಸಚಿವ ರಾಮುಲು ಕಚೇರಿಯಲ್ಲಿ ಸಿಎಂ ಫೋಟೋ ಕಣ್ಮರೆಯಾಗಿರುವುದಂತು ಹತ್ತಾರು ಸಂಶಯಗಳಿಗೆ ಕಾರಣವಾಗಿದೆ.
PublicNext
19/10/2021 06:18 pm