ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಹೆಬ್ಬೆಟ್ಟು ಗಿರಾಕಿ ಮೋದಿ' ಎಂದು ಕಾಂಗ್ರೆಸ್ ಟ್ವೀಟ್: ಡಿಕೆಶಿ ವಿಷಾದ

ಬೆಂಗಳೂರು:ಕೆಪಿಸಿಸಿ ಟ್ವಿಟರ್ ಖಾತೆಯಿಂದ ಯಡವಟ್ಟಾಗಿದೆ. ಹ್ಯಾಷ್ ಟ್ಯಾಗ್ ಮೂಲಕ 'ಹೆಬ್ಬೆಟ್ಟು ಗಿರಾಕಿ ಮೋದಿ' ಎಂದು ಟ್ವೀಟ್ ಮಾಡಲಾಗಿತ್ತು. ಇದು ಬಿಜೆಪಿಯ ಕೆಂಗಣ್ಣಿಗೆ ಕಾರಣವಾದ ಕೂಡಲೇ ಟ್ವೀಟ್ ಡಿಲಿಟ್ ಮಾಡಲಾಗಿದೆ.

ಆದ್ರೆ 'ಕರ್ನಾಟಕ ಕಾಂಗ್ರೆಸ್' ಟ್ವಿಟರ್ ಖಾತೆಯಿಂದ ಮಾಡಲಾಗಿದ್ದ ಈ ಟ್ವೀಟ್‌ನ ಸ್ಕ್ರೀನ್ ಶಾಟ್ ಎಲ್ಲೆಡೆ ವೈರಲ್ ಆಗಿದೆ. ಇದರ ಬೆನ್ನಲ್ಲೇ ಟ್ವೀಟ್ ನಲ್ಲಿ ಬಳಸಲಾದ ಪದಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ಹೀಗಿದೆ..

'ಕಾಂಗ್ರೆಸ್ ಶಾಲೆಗಳನ್ನು ಕಟ್ಟಿಸಿತ್ತು. ಆದರೂ ನರೇಂದ್ರ ಮೋದಿ ಓದಲಿಲ್ಲ‌. ವಯಸ್ಕರ ಶಿಕ್ಷಣ ಯೋಜನೆಯನ್ನೂ ಮಾಡಿತ್ತು. ಆದರೂ ಓದಲಿಲ್ಲ.'

'ಭಿಕ್ಷಾಟನೆ ನಿಷೇಧವಿದ್ದರೂ ಭಿಕ್ಷೆ ಬೇಡುವ ಸೋಂಬೇರಿ ಜೀವನದ ಗೀಳಿಗೆ ಬಿದ್ದವರು ಇಂದು ದೇಶವಾಸಿಗಳನ್ನು ಭಿಕ್ಷುಕರನ್ನಾಗಿಸಿದ್ದಾರೆ.'

'#ಹೆಬ್ಬೆಟ್ಟು ಗಿರಾಕಿ ಮೋದಿಯಿಂದ ದೇಶ ನರಳುತ್ತಿದೆ. '

ಹೀಗೆ ಕಾಂಗ್ರೆಸ್ ಮಾಡಿದ ಟ್ವೀಟ್ ಬಗ್ಗೆ ಈಗ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ. ಈ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಡಿಕೆಶಿ, ಕಾಂಗ್ರೆಸ್ ಪಕ್ಷ ಎಂದಿಗೂ ಇಂತಹ ಪ್ರಮಾದವನ್ನು ಸಹಿಸೋದಿಲ್ಲ ಎಂದಿದ್ದಾರೆ‌.

Edited By : Nagaraj Tulugeri
PublicNext

PublicNext

19/10/2021 08:38 am

Cinque Terre

47.62 K

Cinque Terre

25

ಸಂಬಂಧಿತ ಸುದ್ದಿ