ಹಾಸನ:ಕುಮಾರಸ್ವಾಮಿ ರೇವಣ್ಣ ಹೊಡೆದಾಡುತ್ತಾರೆ ಎಂದು ಬಿಜೆಪಿ, ಕಾಂಗ್ರೆಸ್ ಪಕ್ಷದವರು ಕನಸು ಕಂಡರೂ ಅದು ನನಸಾಗಲ್ಲ ಎಂದು ಜಮೀರ್ ಹೇಳಿಕೆಗೆ ಜೆಡಿಎಸ್ ಮುಖಂಡ ಹೆಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ. ರೇವಣ್ಣ ಉಪಮುಖ್ಯಮಂತ್ರಿ ಆಗುವುದನ್ನೇ ಕುಮಾರಸ್ವಾಮಿ ಸಹಿಸಲಿಲ್ಲ ಎಂಬ ಜಮೀರ್ ಹೇಳಿಕೆಗೆ ಹಾಸನದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಪ್ರಾದೇಶಿಕ ಪಕ್ಷವಾದ ನಾವು ಒಬ್ಬರು ಸಾಬ್ರನ್ನು ಅಧ್ಯಕ್ಷರನ್ನಾಗಿ ಮಾಡಿ, ಕೇಂದ್ರದ ಮಂತ್ರಿ ಮಾಡಿದ್ದೇವೆ. ಇವರು ಇಬ್ರಾಹಿಂ ಬಳಿ ಕೆಲಸ ಮಾಡಿಸಿಕೊಂಡು ಎಂಎಲ್ ಸಿ ಮಾಡಲು ಎಷ್ಟು ಗೋಳು ಹೊಯ್ದುಕೊಂಡಿದ್ದಾರೆ ಗೊತ್ತು. ಅವರಿಗೆ ಒಂದು ಮಾತು ಹೇಳ್ತೀನಿ, ಅವರಿಗೆ ನಮ್ಮ ಸುದ್ದಿ ಬೇಡ. ಕುಮಾರಸ್ವಾಮಿ ರೇವಣ್ಣ ಹೊಡೆದಾಡುತ್ತಾರೆ ಎಂದು ಬಿಜೆಪಿ, ಕಾಂಗ್ರೆಸ್ ಅವರು ಕನಸಲ್ಲಿ ಕಂಡರೂ ಆಗಲ್ಲ ಎಂದು ಕಿಡಿಕಾರಿದ್ದಾರೆ.
ನನ್ನನ್ನು ಉಪಮುಖ್ಯಮಂತ್ರಿ ಮಾಡೋಕೆ ಕಾಂಗ್ರೆಸ್ ನವರು ಬಿಡಲಿಲ್ಲ. 17 ಜನರನ್ನು ಕರೆದುಕೊಂಡು ಹೋದರು. ಕುಮಾರಸ್ವಾಮಿ ಮಗನನ್ನು, ದೇವೇಗೌಡರನ್ನು ಸೋಲಿಸಿದ್ರು ಎಂದು ರೇವಣ್ಣ ವಾಗ್ದಾಳಿ ನಡೆಸಿದರು.
PublicNext
18/10/2021 07:27 pm