ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭ್ರಷ್ಟಾಚಾರ ನಿಗ್ರಹ ದಳಕ್ಕೆ ಡಿಕೆಶಿ ವಿರುದ್ಧ ಭ್ರಷ್ಟಾಚಾರದ ದೂರು ದಾಖಲು

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ಭ್ರಷ್ಟಾಚಾರದ ದೂರು ದಾಖಲಾಗಿದೆ. ಭ್ರಷ್ಟಾಚಾರ ನಿಗ್ರಹ ದಳಕ್ಕೆ ಹೆಲ್ಪಿಂಗ್ ಸಿಟಿಜನ್ ಹೆಲ್ಪಿಂಗ್ ಸಿಟಿಜನ್ ಅಂಡ್ ಪೀಪಲ್ಸ್ ಕೋರ್ಟ್ ಎಜಿಓ ಸಂಸ್ಥಾಪಕ ಆಲಂ ಪಾಷಾ ರಿಂದ ದೂರು ಸಲ್ಲಿಸಿದ್ದಾರೆ.

ಡಿಕೆಶಿ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿಯೇ ಆಲಂ ಪಾಷಾ ದೂರು ಸಲ್ಲಿಸಿದ್ದಾರೆ. ಕಾಂಗ್ರೆಸ್ ಹೈ ಕಮಾಂಡ್ ಗೆ ಡಿಕೆಶಿ ಭ್ರಷ್ಟಾಚಾರದ ಬಗ್ಗೆ ತಿಳಿದಿತ್ತು.ಆದರೂ, ಕೆಪಿಸಿಸಿ ಅಧ್ಯಕ್ಷಗಿರಿ ಕೊಟ್ಟಿದ್ದಾರೆ. ಇದು ಎಷ್ಟು ಸರಿ ಅನ್ನೋ ಅರ್ಥದಲ್ಲಿ ಕೇಳಿರೋ ಆಲಂ ಪಾಷಾ, ಸಲೀಂ ಹಾಗೂ ಉಗ್ರಪ್ಪ ಮಾತನಾಡಿರೋ ಸಂಭಾಷಣೆ ಅಕ್ಷರಷಃ ಸತ್ಯವಾಗಿದೆ ಎಂದು ಆಲಂ ಪಾಷಾ ದೂರು ಸಲ್ಲಿಸಿದ್ದಾರೆ.

ಡಿಕೆಶಿ ನೀರಾವರಿ ಹಾಗೂ ಜಲ ಸಂಪನ್ಮೂಲ ಇಲಾಖೆ ಸಚಿವಾರಾಗಿದ್ದಾಗ ಭ್ರಷ್ಟಾಚಾರ ನಡೆದಿದೆ. ಡಿಕೆಶಿ 8 ರಿಂದ 12 ಪರ್ಸೆಂಟೇಜ್ ಕಮಿಷನ್ ಪಡೆದಿದ್ದಾರೆಂದು ಆರೋಪಿಸಲಾಗಿದೆ. 2023ರ ಚುನಾವಣೆಗಾಗಿ ಕೋಟಿ ಕೋಟಿ ಭ್ರಷ್ಟಾಚಾರದ ಹಣ ಸಂಪಾದಿಸಿದ್ದಾರೆ ಎಂದು ಕೂಡ ಆರೋಪ ಬಂದಿದೆ. ಇತ್ತೀಚಿಗೆ ನಡೆದ ಐಟಿ ದಾಳಿಯಲ್ಲಿ ನೀರಾವರಿ ಇಲಾಖೆಯ ಅಕ್ರಮದ ದಾಖಲೆ ಸಿಕ್ಕಿವೆ.

ಎಂ.ಆರ್. ಉಮೇಶ್ ಹಾಗೂ ಮೂವರು ಕಾಂಟ್ರ್ಯಾಕ್ಟರ್ ಬಳಿ 750 ಕೋಟಿ ಅಕ್ರಮ‌ ಆಸ್ತಿ ಸಿಕ್ಕಿದೆ. ಲಂಚ ಪಡೆದು ಗುತ್ತಿಗೆದಾರರಿಗೆ ಸಾವಿರಾರು ಕೋಟಿ ಬಿಡುಗಡೆ ಮಾಡಲಾಗಿದೆ. ಡಿಕೆಶಿ ಮಾತ್ರವಲ್ಲ ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ದವೂ ಆರೋಪ ಇದೆ. ಆರೋಪಿಗಳ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿ ಭ್ರಷ್ಟಾಚಾರ ನಿಗ್ರಹ ದಳದ ಹಿರಿಯ ಅಧಿಕಾರಿಗಳ ಭೇಟಿ ಮಾಡಿ ದೂರು ನೀಡಿದ ಆಲಂ ಪಾಷಾ.

Edited By :
PublicNext

PublicNext

18/10/2021 04:25 pm

Cinque Terre

26.87 K

Cinque Terre

0

ಸಂಬಂಧಿತ ಸುದ್ದಿ