ವಿಜಯಪುರ:ರಾಜ್ಯದಲ್ಲಿ ಪೊಲೀಸ್ ಇಲಾಖೆ ಕೇಸರೀಕರಣವಾಗುತ್ತಿದೆ.ಒಬ್ಬರೊಬ್ಬರು ಬೇಕಾದ್ರೆ ಕೇಸರಿ ವಸ್ತ್ರಗಳನ್ನು ಹಾಕಿಕೊಳ್ಳಲಿ.ಆದ್ರೆ ಇಡೀ ಠಾಣೆಯ ಎಲ್ಲಾ ಅಧಿಕಾರಿ, ಸಿಬ್ಬಂದಿಗಳೂ ಕೇಸರಿಯಾಗ್ತಿದ್ದಾರೆ.ಈ ವಿಚಾರವನ್ನು ನಾನು ಟ್ವೀಟ್ ನಲ್ಲಿ ಖಂಡಿಸಿದ್ದೇನೆ ಎಂದು ಸಿಂದಗಿಯ ಮೊರಟಗಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಪಕ್ಷದವರು, ಆರ್ ಎಸ್ ಎಸ್ ನವರು ಬೇಕಾದ್ದು ಮಾಡಿಕೊಳ್ಳಲಿ.ಆದ್ರೆ, ಸರ್ಕಾರಿ ಅಧಿಕಾರಿಗಳು, ಸರ್ಕಾರಿ ಇಲಾಖೆಗಳನ್ನೇ ಕೇಸರಿಕರಣ ಮಾಡೋದು ಎಷ್ಟು ಸರಿ..?ಹೀಗಾಗಿ ಕೇಸರಿ ಜೊತೆ ತ್ರಿಶೂಲವನ್ನೂ ಕೈಯಲ್ಲಿ ಕೊಟ್ಟುಬಿಡಿ ಎಂದು ವ್ಯಂಗ್ಯವಾಗಿ ಹೇಳಿದ್ದೆ ಅಷ್ಟೇ ಎಂದಿದ್ದಾರೆ ಸಿದ್ದು.
PublicNext
18/10/2021 12:54 pm