ಬೆಂಗಳೂರು: ಎಚ್.ಡಿ.ಕುಮಾರ್ ಸ್ವಾಮಿ ಒಬ್ಬ ಡೀಲ್ ಮಾಸ್ಟರ್.ದಿನದ 16 ಗಂಟೆ ನಾನು ಇವರೊಟ್ಟಿಗೆ ಇದ್ದವನು.ಯಾವುದೇ ಉದ್ದೇಶ ಇಲ್ಲದೇ ಯಾವುದೇ ಕೆಲಸವನ್ನೂ ಕುಮಾರಸ್ವಾಮಿ ಮಾಡೋದಿಲ್ಲ. ಸಿಂದಗಿ ಮತ್ತು ಹಾನಗಲ್ ಅಲ್ಲಿ ಬಿಜೆಪಿಗೆ ಸಹಾಯ ಆಗಲೆಂದೇ ಮುಸ್ಲಿಂ ಅಭ್ಯರ್ಥಿಯನ್ನ ನಿಲ್ಲಿಸಿದ್ದಾರೆ ಎಂದು ಶಾಸಕ ಜಮೀರ್ ಅಹ್ಮದ್ ಆರೋಪಿಸಿದ್ದಾರೆ.
ಎಚ್ಡಿಕೆ ಬಗ್ಗೆ ಜಮೀರ್ ಅಹ್ಮದ್ ಸರಣಿ ಟ್ವಿಟ್ ಮೂಲಕ ಈಗ ಟೀಕಿಸುತ್ತಲೇ ಇದ್ದಾರೆ.ಬಸವ ಕಲ್ಯಾಣದ ಅಂದಿನ ಎಲೆಕ್ಷನ್ ಕೂಡ ನೆನಪಿಸಿಕೊಂಡಿದ್ದಾರೆ. ಇಲ್ಲಿ ಮುಸ್ಲಿಂ ಅಭ್ಯರ್ಥಿಯನ್ನ ನಿಲ್ಲಿಸಿದರು. ಹಾಗೆ ನಿಂತಿರೋ ಆ ಅಭ್ಯರ್ಥಿ ದರ್ಗಾದ ಗುರುಗಳಾಗಿದ್ದರು. ಅವರಿಗೆ 12000 ವೋಟ್ ಬಂದಿದ್ದವು. ಆದರೆ ಅಲ್ಲಿ ಗೆದ್ದವರು ಯಾರು ? ಬಿಜೆಪಿ ಅಭ್ಯರ್ಥಿ ಅಲ್ಲವೇ..? ಕುಮಾರ್ ಸ್ವಾಮಿ ಬಿಜೆಪಿಯ `ಬಿ' ಟೀಮ್ ಅಂತ ಹೇಳೋಕೆ ಬೇರೆ ಸಾಕ್ಷ್ಯ ಬೇಕೆ ಅಂತಲೇ ಕೇಳಿದ್ದಾರೆ ಜಮೀರ್ ಅಹ್ಮದ್.
PublicNext
17/10/2021 02:08 pm