ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: 'ಕಲೆಕ್ಷನ್ ಗಿರಾಕಿ' ಅಂತ ಅವರೇ ಹೇಳಿದ ಮೇಲೆ ನಾವೇನು ಹೇಳೋದಿದೆ?

ಬೆಳಗಾವಿ: ಡಿಕೆಶಿ 'ಕಲೆಕ್ಷನ್ ಗಿರಾಕಿ' ಎಂದು ಕಾಂಗ್ರೆಸ್ ನಾಯಕರಿಂದಲೇ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ‌ನಾರಾಯಣ್ ಅವರ ಪಕ್ಷದವರೇ ಈ ರೀತಿ ಮಾತಾಡಿಕೊಳ್ಳುತ್ತಿರುವಾಗ ನಾನು ಹೇಳೋದೇನಿದೆ? ಎಂದು ಪ್ರಶ್ನಿಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರ ಪಕ್ಷದವರೇ ಈ ರೀತಿ ಮಾತಾಡುತ್ತಿರುವಾಗ ನಾವು ವಿಶ್ಲೇಷಣೆ ಮಾಡಲಿಕ್ಕೆ ಅವಕಾಶ ಇಲ್ಲ. ಅವರ ಪಕ್ಷದವರೇ ಹೇಳಿದ್ದಾರಂದ್ರೆ ಯಾವ ಪರಿಸ್ಥಿತಿ ಇದೆ ಎಂದು ನೀವೇ ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ. ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನಕ್ಕೆ ಪೈಪೋಟಿ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರದಲ್ಲಿ ಸಿಎಂ ಏನೂ ಮಾಡಬೇಕೆಂದು ನಿಶ್ಚಯ ಮಾಡ್ತಾರೆ. ಅವರೇ ಮುಂದುವರಿಸುತ್ತಾರಾ ? ಬೇರೆಯವರಿಗೆ ಕೊಡ್ತಾರಾ ಎಂಬುದನ್ನು ಸಿಎಂ ಈಗಾಗಲೇ ಹೇಳಿದ್ದಾರೆ ಸಿಎಂ ಎಲ್ಲರ ಜೊತೆ ಸಮಾಲೋಚನೆ ಮಾಡ್ತೀವಿ ಎಂದಿದ್ದಾರೆ ಎಂದು ಉತ್ತರಿಸಿದ್ದಾರೆ.

Edited By : Manjunath H D
PublicNext

PublicNext

13/10/2021 04:47 pm

Cinque Terre

37.91 K

Cinque Terre

0

ಸಂಬಂಧಿತ ಸುದ್ದಿ