ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ ನ್ನು ಬೆತ್ತಲಾಗಿಸಿದ ಸಿಎಂ.ಇಬ್ರಾಹಿಂ : ವಿಡಿಯೋ ಹಂಚಿಕೊಂಡ ಬಿಜೆಪಿ

ಬೆಂಗಳೂರು: ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗ, ಕೇಂದ್ರದ ಮಾಜಿ ಸಚಿವ ಸಿ. ಎಂ. ಇಬ್ರಾಹಿಂ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲು ತೀರ್ಮಾನಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿವೆ. ನವೆಂಬರ್ ಬಳಿಕ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ನಂತರ ಕಾಂಗ್ರೆಸ್ ಸದಸ್ಯತ್ವಕ್ಕೂ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ.

ಇದರ ಮಧ್ಯೆ ಬಿಜೆಪಿ ಕರ್ನಾಟ ಸಿ. ಎಂ. ಇಬ್ರಾಹಿಂ ಅವರ ವಿಡಿಯೋವೊಂದನ್ನು ಟ್ವಿಟ್ ರನಲ್ಲಿ ಹಂಚಿಕೊಂಡಿದೆ. ದಶಕಗಳಿಂದ ಅಲ್ಪಸಂಖ್ಯಾತರ ಮುಂಗೈಗೆ ಬೆಲ್ಲ ಸವರುತ್ತಲೇ ಬಂದ ಕಾಂಗ್ರೆಸ್ಸಿಗರೇ, ಸಿ.ಎಂ.ಇಬ್ರಾಹಿಂ ಅವರ ಈ ಪ್ರಶ್ನೆಗೆ ನಿಮ್ಮ ಉತ್ತರವೇನು? ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಮೇಲೆ ಹೊಂದಿರುವ ಪ್ರೀತಿಯ ನಿಜಬಣ್ಣವನ್ನು ಇಬ್ರಾಹಿಂ ಬೆತ್ತಲಾಗಿಸಿದ್ದಾರೆ. ಎಂದು ಟ್ವೀಟ್ ಮಾಡಿದೆ.

Edited By : Nirmala Aralikatti
PublicNext

PublicNext

12/10/2021 01:37 pm

Cinque Terre

44.9 K

Cinque Terre

5

ಸಂಬಂಧಿತ ಸುದ್ದಿ