ಯಾದಗಿರಿ: ಸಾರಿಗೆ ಸಚಿವ ಶ್ರೀರಾಮುಲು ಅವರ ಕಾರನ್ನು ಅಡ್ಡಗಟ್ಟಿ ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಬಾಬುರಾವ್ ಚಿಂಚನಸೂರ ಆಕ್ರೋಶ ಹೊರಹಾಕಿದ ಘಟನೆ ಇಂದು ನಡೆದಿದೆ.
ಯಾದಗಿರಿ ತಾಲ್ಲೂಕಿನ ಬಂದಳ್ಳಿ ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ನೀಡದ ಹಿನ್ನೆಲೆಯಲ್ಲಿ ಬಾಬುರಾವ ಚಿಂಚನಸೂರ ಅವರು ಜಿಲ್ಲಾಡಳಿತ, ಸಚಿವ ಶ್ರೀರಾಮಲು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈದು ಕಾರ್ಯಕ್ರಮ ರದ್ದುಗೊಳಿಸುವಂತೆ ಆಗ್ರಹಿಸಿದರು.
ಸಿಂದಗಿ ಉಪ ಚುನಾವಣಾ ಅಂಗವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೆ. ಆದರೆ ನನ್ನ ಗಮನಕ್ಕೆ ತಾರದೇ ಸಮಾರಂಭ ಆಯೋಜಿಸಲಾಗಿದೆ. ಏಕಲವ್ಯ ಶಾಲೆ ನಾನು ಸಚಿವನಾಗಿದ್ದಾಗ ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ. ಇಂಥ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡದಿದ್ದರೆ ಹೇಗೆ ಎಂದು ಚಿಂಚನಸೂರ ಕಿಡಿಕಾರಿದರು. ಬಾಬುರಾವ್ ಚಿಂತನಸೂರ ಅವರ ಆಕ್ರೋಶಕ್ಕೆ ಮಣಿದ ಸಚಿವರು ಕಾರ್ಯಕ್ರಮವನ್ನು ರದ್ದುಗೊಳಿಸಿ ವಾಪಸ್ ನಡೆದರು.
PublicNext
09/10/2021 05:47 pm