ಜೆಡಿಎಸ್ ನ್ನ ರಾಜ್ಯದ ಜನ ಮರೆಯುತ್ತಿರುವ ಸಂದರ್ಭದಲ್ಲಿ ಆರ್ ಎಸ್ ಎಸ್ ಅನ್ನು ಟೀಕಿಸಿದರೆ ಪ್ರಚಾರ ಸಿಗುತ್ತದೆ ಹಾಗೂ
ಮುಸ್ಲಿಂಮರನ್ನ ಸಂತೃಪ್ತಿ ಪಡಿಸಿದಂಗೂ ಆಯ್ತು ಅನ್ನೋ ಭ್ರಮೆಯಲ್ಲಿ ಜೆಡಿಎಸ್ ಇದೆ ಎಂದು ಮಾಜಿ ಸಿ.ಎಮ್ ಕುಮಾರಸ್ವಾಮಿ ಹಾಗೂ ಜೆಡಿಎಸ್ ವಿರುದ್ಧ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸೂರ್ಯನಿಗೆ ಬೈದರೆ ದೊಡ್ಡವನಾಗ್ತೀನಿ ಅನ್ನೋ ಭ್ರಮೆಯಲ್ಲಿ ಕುಮಾರಸ್ವಾಮಿ ಇದ್ದಾರೆ ಎಂದು ಗದಗ ನಗರದಲ್ಲಿ ಸಚಿವರು ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಎಲ್ಲಿ? ಆರ್ ಎಸ್ ಎಸ್ ಎಲ್ಲಿ? ಕಾಶ್ಮೀರ ಪಂಡಿತರ ಸಾವಿಗೆ ಆರ್ ಎಸ್ ಎಸ್ ಕಾರಣ ಅಂತಾರೆ
ಇಷ್ಟು ಕೀಳು ಮಟ್ಟದ ರಾಜಕಾರಣಕ್ಕೆ ಕುಮಾರಸ್ವಾಮಿ ಇಳಿತಾರೆ ಅನ್ಕೊಂಡಿರಲಿಲ್ಲ.
ಕುಮಾರಸ್ವಾಮಿಯವರಿಗೆ ಭಗವಂತ ಬುದ್ದಿಕೊಡಲಿ ಅಂತಾ ದೇವ್ರಲ್ಲಿ ಬೇಡಿಕೊಳ್ಳುತ್ತೇನೆ,
ದೇವೇಗೌಡರ ಮಕ್ಕಳು, ಮೊಮ್ಮಕ್ಕಳು ಆನಂದವಾಗಿ ರಾಜಕಾರಣ ಮಾಡಲಿ ಎಂದು ಟೀಕಿಸಿದ್ದಾರೆ.
PublicNext
09/10/2021 12:11 pm