ಕೋಲ್ಕತ್ತಾ: ಭವನಿಪುರ ಉಪಚನಾವಣೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೇವಾಲ್ ವಿರುದ್ಧ ಸುಮಾರು 58,832 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲು ಎದುರಾಗಿದ್ದ ತೊಡಕಿನ ಹೊರ ಬಂದಿದ್ದಾರೆ.
ಗೆಲುವಿನ ಬಳಿಕ ಪ್ರತಿಕ್ರಿಯೆ ನೀಡಿರುವ ಸಿಎಂ ಮಮತಾ ಬ್ಯಾನರ್ಜಿ, 'ಚುನಾವಣೆಯ ಫಲಿತಾಂಶಕ್ಕೆ ಭಾವಾನಿಪುರ ಕ್ಷೇತ್ರದ ಮತದಾರರು ಮತ್ತು ಪಶ್ಚಿಮ ಬಂಗಾಳದ ಜನರಿಗೆ ಧನ್ಯವಾದವಾಗಳನ್ನು ತಿಳಿಸಬೇಕು' ಎಂದಿದ್ದಾರೆ.
ಸೆಪ್ಟೆಂಬರ್ 30ರಂದು ನಡೆದ ಚುನಾವಣೆಯಲ್ಲಿ ಶೇ. 53.32 ರಷ್ಟು ಮತದಾನವಾಗಿತ್ತು. ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ 26,320 ಮತ ಗಳಿಸಿದ್ದಾರೆ. ಸಿಪಿಐಎಂನ ಶ್ರೀಜಿಬ್ ಬಿಸ್ವಾಸ್ ಕಣದಲ್ಲಿದ್ದರು.
PublicNext
03/10/2021 03:53 pm