ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಎಸ್‌ಐ ಉಗ್ರರನ್ನು ಭಾರತದೊಳಗೆ ನುಸುಳಲು ಬಿಟ್ಟವರು ಯಾರು?: ಸಿ.ಟಿ ರವಿ ಪ್ರಶ್ನೆ

ಬೆಂಗಳೂರು: ದೇಶದೊಳಗೆ ತಾಲಿಬಾನಿಗಳನ್ನು ಹಾಗೂ ಐಎಸ್‌ಐ ಉಗ್ರರನ್ನು ನುಸುಳಲು ಬಿಟ್ಟವರು ಯಾರು? ಆ ಮೂಲಕ ಅಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಯುವಂತೆ ಮಾಡಿದವರು ಯಾರು ? ಎಂದು ಪ್ರಶ್ನಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪ್ರಶ್ನೆ ಮಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿ.ಟಿ ರವಿ ನಡುವೆ ಟ್ವೀಟ್ ಸಮರ ಮುಂದುವರೆದಿದೆ. ಪಂಚೆ ಪ್ರಸಂಗಕ್ಕೆ ಟಾಂಗ್ ಕೊಟ್ಟು ಮಾತನಾಡಿದ್ದ ಸಿ.ಟಿ ರವಿಗೆ ಕಾಂಗ್ರೆಸ್ ಕೂಡ ಟ್ವೀಟ್ ಮೂಲಕವೇ ತಿರುಗೇಟು ನೀಡಿತ್ತು. ಈಗ ಮತ್ತೆ ಸರಣಿ ಟ್ವೀಟ್ ಮಾಡಿರುವ ಸಿ.ಟಿ ರವಿ ಭಯೋತ್ಪಾದನಾ ದಾಳಿಗೂ ಕಾಂಗ್ರೆಸ್‌ಗೂ ಪರೋಕ್ಷವಾಗಿ ಲಿಂಕ್ ಕೊಟ್ಟಿದ್ದಾರೆ.

ಸಿದ್ದರಾಮಯ್ಯನವರೇ, ಆರ್‌ಎಸ್‌ಎಸ್‌ ಅಂದರೇನು ಎಂಬುದು ನಿಮ್ಮ ಘನ ಹೃದಯಕ್ಕೆ ಅರ್ಥವಾಗಬೇಕಾದರೆ ಮೊದಲು ನೀವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗೆ ಬರಬೇಕು. ಆರ್‌ಎಸ್‌ಎಸ್‌ ಎಂಬುದನ್ನು ಹೊರಗಿನಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಏಕೆಂದರೆ ಅದು ಕೊಡುವ ಶಿಕ್ಷಣ, ಪ್ರೇರಣೆಯನ್ನು ಹತ್ತಿರದಿಂದ ನೋಡಿದಾಗ ನಿಮಗೆ ಅರ್ಥವಾಗಬಹುದು. ನಿಮ್ಮ ಪಕ್ಷದಲ್ಲೇ ಕೇಂದ್ರದಲ್ಲಿ ವಿತ್ತ ಸಚಿವರಾಗಿ, 40 ವರ್ಷ ರಾಜಕೀಯ ಜೀವನದಲ್ಲಿ ಇದ್ದು, 13ನೇ ರಾಷ್ಟ್ರಪತಿಯಾಗಿ ನಿಧನರಾದ ಪ್ರಣವ್ ಮುಖರ್ಜಿ ಅವರ ಜೀವನ ಚರಿತ್ರೆಯನ್ನು ಒಮ್ಮೆ ಓದಿ ಸಿದ್ದರಾಮಯ್ಯ ನವರೇ. ಆರ್‌ಎಸ್‌ಎಸ್‌ ಅಂದರೇನು ಎಂಬುದನ್ನು ಅವರು ವಿವರಿಸಿದ್ದಾರೆ. ಆಗಲಾದರೂ ಆರ್‌ಎಸ್‌ಎಸ್‌ ಬಗ್ಗೆ ನಿಮ್ಮ ಧೋರಣೆ ಬದಲಾಗಬಹುದು ಎಂದು ಕಿಡಿಕಾರಿದ್ದಾರೆ.

Edited By : Nagaraj Tulugeri
PublicNext

PublicNext

29/09/2021 01:58 pm

Cinque Terre

47.37 K

Cinque Terre

4

ಸಂಬಂಧಿತ ಸುದ್ದಿ