ಮುಲ್ಕಿ: ರಾಜ್ಯ ಸರಕಾರದ ಆದೇಶದ ಮೇರೆಗೆ ದೇವಾಲಯಗಳ ಧ್ವಂಸ ಕಾರ್ಯವನ್ನು ವಿರೋಧಿಸಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೃಹತ್ ಪಾದಯಾತ್ರೆ ರಾಷ್ಟ್ರೀಯ ಹೆದ್ದಾರಿ ಕೊಲ್ನಾಡು ನಿಂದ ಮುಲ್ಕಿ ಬಸ್ ನಿಲ್ದಾಣದವರೆಗೆ ನಡೆಯಿತು
ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಸಾಮಾಜಿಕ ಕಾರ್ಯಕರ್ತ ಸುಧೀರ್ ಮರಳಿ ಮಾತನಾಡಿ ಹಿಂದುತ್ವದ ಹೆಸರಿನಲ್ಲಿ ಅಧಿಕಾರ ಪಡೆದು ಹಿಂದೂ ದೇವಾಲಯವನ್ನು ದ್ವಂಸಗೊಳಿಸುವ ಮೂಲಕ ಬಿಜೆಪಿಯ ಗೋಮುಖವ್ಯಾಘ್ರ ಮುಖವಾಡವನ್ನು ಕಳಚಬೇಕಾಗಿದೆ ಎಂದರು
ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪವಿತ್ರ ಕ್ಷೇತ್ರ ಕಟೀಲಿನ ಇಡಲು ಯೋಗ್ಯವಲ್ಲದ ವ್ಯಕ್ತಿಯಾಗಿದ್ದು ನಳಿನ್ ಕುಮಾರ್ ಪಂಪ್ವೆಲ್ ಎಂದು ಹೆಸರಿಟ್ಟುಕೊಂಡು ಪಂಪ್ವೆಲ್ ಸೇತುವೆ ಉದ್ಘಾಟನೆ ಹಾಗೂ ಒಡೆಯುವ ಕೆಲಸ ಮಾಡಲಿ ಎಂದು ವ್ಯಂಗ್ಯವಾಡಿದರು. ಜಿಲ್ಲೆಗೆ ಬೆಂಕಿ ಇಡುತ್ತೇನೆ ಎಂದು ಹೇಳುತ್ತಾ ಯೋಗ್ಯತೆ ಇಲ್ಲದ ಸಂಸದರು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ..
ಧರ್ಮದ ಹೆಸರಲ್ಲಿ ಶ್ರದ್ಧೆ ಹಾಗೂ ಭಕ್ತಿ ಇದ್ದರೆ ದೇವಾಲಯ ಧ್ವಂಸ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ರಾಜೀನಾಮೆ ನೀಡಲಿ ಎಂದು ಸವಾಲೆಸೆದರು.
ನಂಜನಗೂಡಿನ ದೇವಸ್ಥಾನವನ್ನು ದ್ವಂಸ ಗೊಳಿಸಿದಾಗಮೈಸೂರು ಸಂಸದ ಪ್ರತಾಪ ಸಿಂಹ ಪ್ರತಿಭಟಿಸಿದರು.ಆದರೆ ಅವರ ಪ್ರತಿಭಟನೆ ಕೇವಲ ನಾಟಕೀಯವಾಗಿತ್ತು ಎಂದು ಹೇಳಿದ ಅವರು ದುಷ್ಟಬುದ್ಧಿಯ ಬಿಜೆಪಿಗರಿಗೆ ದೇವರು ಸಂಸ್ಕಾರ ನೀಡಲಿ ಎಂದು ಪ್ರಾರ್ಥಿಸಿದರು
ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಮಾತನಾಡಿ,
ಬಿಜೆಪಿಯ ಹಿಂದುತ್ವದ ಸುಳ್ಳಿನ ಮುಖವಾಡ ಬಯಲುಮಾಡಬೇಕು. ಹಾಗೂ ಎಲ್ಲಾ ಮತ ಧರ್ಮಗಳ ದೇಗುಲ ಹಾಗೂ ಪ್ರಾರ್ಥನಾ ಮಂದಿರಗಳಿಗೆ ರಕ್ಷಣೆ ನೀಡದಿದ್ದರೆ ಕಾಂಗ್ರೆಸ್ ಈ ಬಗ್ಗೆ ಹೋರಾಟ ನಡೆಸಲಿದೆ ಎಂದು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.
ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಕೆಪಿಸಿಸಿ ಕೋಆರ್ಡಿನೇಟರ್ ವಸಂತ್ ಬೆರ್ನಾಡ್, ಕೆಪಿಸಿಸಿ ಹಿಂದುಳಿದ ವರ್ಗದ ಕಾರ್ಯದರ್ಶಿ ಪ್ರವೀಣ್ ಬೊಳ್ಳೂರು,ಮೂಲ್ಕಿ ನ.ಪಂ. ಸದಸ್ಯರಾದ ಯೋಗೀಶ್ ಕೋಟ್ಯಾನ್,ಮಂಜುನಾಥ ಕಂಬಾರ, ಪುತ್ತುಬಾವ,ಮುನ್ನಾ ಮಹೇಶ್, ಬಾಲಚಂದ್ರ ಕಾಮತ್, ವಿಮಲಾ ಪೂಜಾರಿ,ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್ ಜನಾರ್ದನ ಬಂಗೇರಾ, ಧನರಾಜ್, ವೈದ್ಯ ಪ್ರಕೋಷ್ಠದ ಅಧ್ಯಕ್ಷ ಡಾ.ಶೇಖರ ಪೂಜಾರಿ, ಯುವ ಕಾಂಗ್ರೆಸ್ ನಾಯಕಿ ದೀಪಿಕಾ ರೆಡ್ಡಿ, ಮಯ್ಯದ್ದಿ ಪಕ್ಷಿಕೆರೆ ಸುರೇಶ್ ಪಂಜ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ಎಸಿಪಿ ಮಹೇಶ್ ಕುಮಾರ್ ಹಾಗೂ
ಮುಲ್ಕಿ ಪೊಲೀಸರ ನೇತೃತ್ವದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು
PublicNext
22/09/2021 09:41 pm