ಬೆಂಗಳೂರು: ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ವಿಚಾರ ಇಂದು ಸದನದಲ್ಲಿ ಪ್ರಸ್ತಾಪವಾಗಿತ್ತು. ಘಟನೆ ಬಗ್ಗೆ 'ಆ ಯುವತಿ ಆ ಹೊತ್ತಲ್ಲಿ ಅಲ್ಲಿಗೆ ಹೋಗಬಾರದಿತ್ತು' ಎಂದು ಹೇಳಿದ್ದ ಗೃಹಸಚಿವರ ಹೇಳಿಕೆ ಮುನ್ನಲೆಗೆ ಬಂತು.
ಇದೇ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ನೀವು ಈ ರೀತಿ ಹೇಳಿಕೆ ನೀಡಿದ್ದು ಸರಿನಾ? ಎಂದು ವಾಗ್ದಾಳಿ ನಡೆಸಿದರು. ಪೊಲೀಸರು ಏನ್ಮಾಡ್ತಿದ್ದಾರೆ. ಅಲ್ಲಲ್ಲಿ ಲಿಕ್ಕರ್ ಶಾಪ್ ಗೆ ಹೋಗಿ ವಸೂಲಿ ಮಾಡಿಕೊಂಡು ತಿರುಗಾಡುತ್ತಿದ್ದಾರೆ ಅಷ್ಟೇ ಎಂದ ಸಿದ್ದರಾಮಯ್ಯ ಸಿಡಿಮಿಡಿಗೊಂಡರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ ಮಧ್ಯರಾತ್ರಿ ಹುಡುಗಿ ಓಡಾಡಬೇಕು ನಿಜ. ಆದ್ರೆ ಆ ಪರಿಸ್ಥಿತಿ, ವಾತಾವರಣ ಈಗ ಇದೆಯಾ? ಎಂದು ಮರುಪ್ರಶ್ನೆ ಹಾಕಿದರು. ಇದಕ್ಕೆ ಪಟ್ಟು ಬಿಡದ ಸಿದ್ದರಾಮಯ್ಯ 'ಹಾಗಾದ್ರೆ ಆ ಸ್ಟೇಟ್ಮೆಂಟ್ ಯಾಕೆ ವಾಪಸ್ ತಗೊಂಡ್ರಿ? ಎಂದು ಪ್ರಶ್ನೆ ಮಾಡಿದರು.
PublicNext
22/09/2021 08:32 pm