ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ನನ್ನ ಕ್ಷೇತ್ರದಲ್ಲಿ ಇದುವರೆಗೂ ಬಗರ್ ಹುಕುಂ ಸಮಿತಿ ರಚನೆ ಮಾಡಿಲ್ಲ : ಶಾಸಕ ಟಿ. ರಘುಮೂರ್ತಿ ಆರೋಪ

ಚಿತ್ರದುರ್ಗ : ನನ್ನ ಕ್ಷೇತ್ರದಲ್ಲಿ ಇದುವರೆಗೂ ಬಗರ್ ಹುಕುಂ ಸಮಿತಿ ರಚನೆ ಮಾಡಿಲ್ಲ ಎಂದು ಚಳ್ಳಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ. ರಘುಮೂರ್ತಿ ಆರೋಪಿಸಿದ್ದಾರೆ. ನಾನು ಕಾಂಗ್ರೆಸ್ ಶಾಸಕ ಎನ್ನುವ ಕಾರಣಕ್ಕೆ ಸರ್ಕಾರ ಸಮಿತಿ ತಡೆ ಹಿಡಿದಿದೆ ಎಂದರು. ಬಿಜೆಪಿ ಸರ್ಕಾರ ಜಿಲ್ಲೆಯ ಐದು ತಾಲೂಕುಗಳಲ್ಲಿಯೂ ಬಗರ್ ಹುಕುಂ ಸಮಿತಿ ರಚಿಸಿದೆ.

ಆದರೆ ನನ್ನ ಕ್ಷೇತ್ರದಲ್ಲಿ ಮಾತ್ರ ಸಮಿತಿ ರಚನೆಯಾಗಿಲ್ಲ ಎಂದರು. ಚಳ್ಳಕೆರೆ ತಾಲೂಕಿನಲ್ಲಿ ಬಗರ್ ಹುಕುಂ ಸಾಗುವಳಿಯ ಸಮಸ್ಯೆಗಳು ಬಗೆ ಹರಿಯದೆ ಹಾಗೆಯೇ ಉಳಿದಿದ್ದು ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರು ಹಾಗೂ ಸಾರ್ವಜನಿಕರು ದಿನನಿತ್ಯ ಪ್ರಶ್ನೆ ಮಾಡುತ್ತಾರೆ ನಾನು ಅವರಿಗೆ ಏನೆಂದು ಉತ್ತರ ಹೇಳಲಿ ಎಂದರು.

ಈ ತಾರತಮ್ಯವನ್ನು ವಿಧಾನಸಭಾ ಅಧಿವೇಶನದಲ್ಲಿ ಪ್ರಶ್ನೆ ಮಾಡಲು ಪ್ರಶ್ನಾವಳಿ ಹಾಕಿದ್ದೇನೆ. ಸರ್ಕಾರ ಯಾವುದೆ ಇರಲಿ ತಾರತಮ್ಯ ಮಾಡಬಾರದು ಅಭಿವೃದ್ದಿ ಕೆಲಸಗಳಿಗೆ ಅಡ್ಡಿ ಮಾಡಬಾರದು ಎಂದು ಶಾಸಕ ಟಿ. ರಘುಮೂರ್ತಿ ಬೇಸರ ವ್ಯಕ್ತಪಡಿಸಿದರು.

Edited By : Shivu K
PublicNext

PublicNext

18/09/2021 03:24 pm

Cinque Terre

78.12 K

Cinque Terre

1

ಸಂಬಂಧಿತ ಸುದ್ದಿ