ಹುಬ್ಬಳ್ಳಿ: ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆಗೆ ನೋಟಿಪಿಕೇಶನ್ ಆಗಿಲಿ.
ಕಲಬುರಗಿ ವಿಚಾರದಲ್ಲಿ ನಾನು ಏನನ್ನು ಮಾತನಾಡಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಲಬುರಗಿ ಮೇಯರ್, ಉಪಮೇಯರ್ ಆಯ್ಕೆ ಬಗ್ಗೆ ಚುನಾವಣಾ ಆಯೋಗ ನೋಟಿಪಿಕೇಶನ್ ಹೊರಡಿಸಲಿ ಆಮೇಲೆ ನೋಡೋಣ ಈಗ ನಾನು ಏನನ್ನು ಮಾತನಾಡುವುದಿಲ್ಲ ಎಂದರು.
2019-20 ಸಾಲಿನಲ್ಲಿ ಮಂಡಿಸಿದ ಅವಾಸ್ತವಿಕ ಬಜೆಟ್ ನಿಂದ 29,863 ಕೋಟಿ ಹಣ ಬಳಕೆಯಾಗದಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿಎಜಿ ವರದಿಯಲ್ಲಿ ಹೇಳಲಾಗಿದೆ. ಅದನ್ನು ಮರಳಿ ಖರ್ಚು ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ಕೊಟ್ಟಿರುವೆ ಎಂದು ಅವರು ಹೇಳಿದರು.
ಶಿಕ್ಷಕರ ವರ್ಗಾವಣೆ ಮುಂದೂಡಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದು ನ್ಯಾಯಾಲಯದ ತೀರ್ಮಾನವಾಗಿದೆ ಎಂದ ಅವರು, ಪೆಟ್ರೋಲ್ ಬೆಲೆ ವಿಚಾರದಲ್ಲಿ ಸೆಸ್ ಕಡಿಮೆ ಮಾಡೋ ಬಗ್ಗೆ ನಾಳೆ ಸದನದಲ್ಲಿ ಉತ್ತರ ಕೊಡುವುದು ಇದೆ. ಸದನದಲ್ಲಿ ಉತ್ತರಿಸುವೆ ಎಂದರು.
ಕರಾವಳಿ ಭಾಗದಲ್ಲಿ ಸೆಟ್ ಲೈಟ್ ಪೋನ್ ಬಳಕೆ ವಿಚಾರವಾಗಿ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಆ ಬಗ್ಗೆ ಗೃಹ ಸಚಿವರು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರ ಸಂಪೂರ್ಣ ನಿಗಾವಹಿಸಿದೆ. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
PublicNext
16/09/2021 06:51 pm