ಚಿತ್ರದುರ್ಗ : ರಕ್ಷಣೆ ಇಲ್ಲದ ಅಮೃತ್ ಮಹಲ್ ಕವಲ್ ನಿಂದ ಅಕ್ರಮವಾಗಿ ಕಲ್ಲು,ಮಣ್ಣು ಗಾಣಿಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪವೊಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಕಡೂರು ಗ್ರಾಮದಲ್ಲಿ ಕೇಳಿ ಬಂದಿತ್ತು.
ಕಡೂರು ಗ್ರಾಮದಲ್ಲಿ ಅಕ್ರಮವಾಗಿ ಕಲ್ಲು, ಮಣ್ಣು ಗಾಣಿಗಾರಿಕೆ ಮಾಡಿ ಬೇರೆಡೆಗೆ ಸಾಗಿಸುತ್ತಿರುವ ಬಗ್ಗೆ ವರದಿ ಪ್ರಸಾರವಾಗಿತ್ತು. ವರದಿ ಬಳಿಕ ಎಚ್ಚೆತ್ತುಕೊಂಡ ಹೊಳಲ್ಕೆರೆ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇನ್ಮುಂದೆ ಗ್ರಾಮದಲ್ಲಿ ಯಾವುದೇ ಅಕ್ರಮವಾಗಿ ಗಾಣಿಕಾರಿಕೆ ನಡೆಯಲು ಬಿಡುವುದಿಲ್ಲ. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ತಹಶೀಲ್ದಾರ್ ಅವರ ಭರವಸೆಯ ಮೇರೆಗೆ ಗ್ರಾಮಸ್ಥರು ಜೆಸಿಬಿ ಹಾಗೂ ಟಿಪ್ಪರ್ ಗಳನ್ನು ಬಿಟ್ಟು ಕಳುಹಿಸಿದ್ದಾರೆ.
PublicNext
13/09/2021 04:40 pm