ಮೈಸೂರು: ದರ್ಗಾ ತೆರವು ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ನೀಡಿದ ಹೇಳಿಕೆಗೆ ಶಾಸಕ ತನ್ವೀರ್ ಸೇಠ್ ಗರಂ ಆಗಿದ್ದಾರೆ. ನಾವೇನು ಕೈಗೆ ಬಳೆ ತೊಟ್ಟು ಕೂತಿಲ್ಲ. ನಿಮ್ಮ ಧಮ್ಕಿಗೆ ನಾವು ಹೆದರಲ್ಲ ಎಂದಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮೈಸೂರಿನ ಅರಸು ರಸ್ತೆ ಮೊದಲು ಬಂತಾ, ಇಲ್ಲ ದರ್ಗಾ ಮೊದಲು ಬಂತಾ ಅನ್ನುವ ವಿಚಾರ ಈಗ ಕೋರ್ಟ್ ನಲ್ಲಿದೆ. ಆ ದರ್ಗಾ ಇದ್ದದ್ದು ಮನೆಯಲ್ಲಿ ಬಳಿಕ ಅಲ್ಲಿ ರಸ್ತೆ ಆಗಿದೆ. ಕೋರ್ಟ್ ಈ ಸಮಸ್ಯೆಯನ್ನು ಬಗೆಹರಿಸುತ್ತದೆ. ಇಂತಹ ವಿಚಾರಗಳು ನ್ಯಾಯಾಲಯದ ಮೂಲಕ ಬಗೆಹರಿಯಬೇಕು. ಅದನ್ನು ಬಿಟ್ಟು ಓರ್ವ ಜನಪ್ರತಿನಿಧಿಯಾಗಿ ಜಿಲ್ಲಾಧಿಕಾರಿಗಳಿಗೆ ಧಮ್ಕಿ ಹಾಕಿರುವುದು ಸರಿಯಲ್ಲ ಎಂದು ಹೇಳಿದರು.
PublicNext
09/09/2021 03:45 pm