ಚಿತ್ರದುರ್ಗ : ಇಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಮಿನಿ ವಿಧಾನಸೌಧದ ಶಂಕುಸ್ಥಾಪನೆ ಕಾರ್ಯಕ್ರಮ ನೇರವೇರಿಸಲು ತಡರಾತ್ರಿ ಚಿತ್ರದುರ್ಗ ನಗರಕ್ಕೆ ಆಗಮಿಸಿರುವ ಕಂದಾಯ ಸಚಿವ ಆರ್. ಅಶೋಕ್ ನಗರದ ಪ್ರವಾಸಿ ಮಂದಿರದಲ್ಲಿ ಊಟ ಮುಗಿಸಿದ ಬಳಿಕ ಕೆಲವು ಕಡೆ ರೌಂಡ್ಸ್ ಹಾಕಿದ್ದಾರೆ. ಜಿಲ್ಲಾಧಿಕಾರಿ ಕಚೇರಿ, ಎಸಿ ಕಛೇರಿ, ಖಜಾನೆ, ಸುತ್ತ ಮುತ್ತ ರೌಂಡ್ಸ್ ಹಾಕಿದ, ಆರ್. ಅಶೋಕ್.
ನಂತರ ಒನಕೆ ಓಬವ್ವ ಪ್ರತಿಮೆ ಬಳಿ ಮುಕ್ತಾಯ ಗೊಂಡಿರುವ ವಾಟರ್ ಫಾಲ್ಸ್ ಕಾಮಗಾರಿ ವೀಕ್ಷಣೆ ಮಾಡಿದರು. ಸಚಿವರಿಗೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಸಾಥ್ ನೀಡಿದರು. ರೌಂಡ್ಸ್ ಮುಗಿದ ಬಳಿಕ ಕಂದಾಯ ಸಚಿವ ಹಾಗೂ ಶಾಸಕ ಗೂಳಿಹಟ್ಟಿ ಡಿ ಶೇಖರ್ ಪೋಟೋಗೆ ಪೋಸ್ ನೀಡಿದ್ದಾರೆ. ತಡರಾತ್ರಿ ಸಚಿವ ಮತ್ತು ಶಾಸಕರಿಗೆ ಅಪಾರ ಜಿಲ್ಲಾಧಿಕಾರಿ ಬಾಲಕೃಷ್ಣ ಹಾಗೂ ಮತ್ತೊಬ್ಬ ಅಧಿಕಾರಿ ಸಾಥ್ ನೀಡಿದರು.
PublicNext
02/09/2021 09:09 am