ಕೋಲಾರ: ಎತ್ತಿನಹೊಳೆ ಯೋಜನೆ ದುಡ್ಡು ಹೊಡೆಯುವ ಕಾರ್ಯಕ್ರಮ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ, ಇತ್ತೀಚೆಗೆ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರು ರಮೇಶ್ ಕುಮಾರ್ ರನ್ನು ಹೊಗಳಿದ ವಿಚಾರವಾಗಿ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ ಹೆಸರಲ್ಲಿ ರಮೇಶ್ ಕುಮಾರ್ ಎತ್ತಿನ ಹೊಳೆ ಯೋಜನೆಯ ಮಹಾನ್ ನಾಯಕ, 3 ವರ್ಷದಲ್ಲಿ ಎತ್ತಿನ ಹೊಳೆ ನೀರು ತರುವುದಾಗಿ ಹೇಳಿದ್ದರು, ಆದರೆ 10 ವರ್ಷವಾದರೂ ಬಂದಿಲ್ಲ ಎಂದು ಕಿಡಿಕಾರಿದ್ದಾರೆ. 50 ಸಾವಿರ ಕೋಟಿ ಹಣ ಖರ್ಚು ಮಾಡಿದರೂ ಎತ್ತಿನಹೊಳೆ ಯೋಜನೆ ಮುಗಿಯಲ್ಲ ಎಂದು ಎಚ್ ಡಿಕೆ ಭವಿಷ್ಯ ನುಡಿದಿದ್ದಾರೆ.
PublicNext
19/08/2021 03:28 pm