ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

RSS ಚಡ್ಡಿಗಳು ಸ್ವಾತಂತ್ರ್ಯ ತಂದವರಲ್ಲ, ಸಿ.ಟಿ.ರವಿ ಅರೆ ಹುಚ್ಚ: 'ಕೈ' ಮುಖಂಡ

ಶಿವಮೊಗ್ಗ: ಆರ್‌ಎಸ್‌ಎಸ್‌ ಚಡ್ಡಿಗಳು ಸ್ವಾತಂತ್ರ್ಯ ತಂದವರಲ್ಲ. ಅಷ್ಟೇ ಅಲ್ಲದೆ ರಾಜ್ಯ ಬಿಜೆಪಿ ನಾಯಕ ಸಿ.ಟಿ.ರವಿ ಅರೆ ಹುಚ್ಚ ಎಂದು ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕರು, ಮಾಜಿ ಪ್ರಧಾನಿಗಳ ವಿರುದ್ಧ ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಿರುದ್ಧ ಬಿ.ವಿ.ಶ್ರೀನಿವಾಸ್ ಕಿಡಿಕಾರಿದ್ದಾರೆ. ನಗರದಲ್ಲಿ ಇಂದು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ 77ನೇ ಜನ್ಮದಿನಾಚರಣೆ ಅಂಗವಾಗಿ ‘ರನ್‌ ಫಾರ್‍ ರಾಜೀವ್‌ ಮ್ಯಾರಥಾನ್’ ಓಟಕ್ಕೆ ಚಾಲನೆ ನೀಡಿ ಬಿಜೆಪಿ ವಿರುದ್ಧ ಹರಿಹಾಯ್ದರು.

ಸಿ.ಟಿ.ರವಿ ಅವರಿಗೆ ಮಂತ್ರಿ ಪದವಿ ಸಿಗದಿದ್ದಕ್ಕೆ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಮಂತ್ರಿಯಾಗುವ ಬಯಕೆ ಇದೆ. ಈ ತರಹ ಗಾಂಧಿ ಪರಿವಾರದ ವಿರುದ್ಧ ಮಾತನಾಡಿದರೆ ಮಂತ್ರಿ ಪದವಿ ಖಚಿತವಾಗಿ ಸಿಗುತ್ತದೆ ಎಂಬುದು ರವಿ ನಂಬಿಕೆ. ಇನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಸಂಘ ಪರಿವಾರದ ನಾಯಕರನ್ನು ಮೆಚ್ಚಿಸಬೇಕಿದೆ. ರವಿ ಅವರಿಗೇನಾದರೂ ಮಾನ ಮರ್ಯಾದೆ ಇದ್ದರೆ ನೆಹರು ಹಾಗೂ ರಾಜೀವ್‌ ಗಾಂಧಿ ಬಗ್ಗೆ ತಿಳಿದುಕೊಂಡು ಮಾತನಾಡದಬೇಕು. ದೇಶಕ್ಕೆ ಅವರದ್ದೇ ಆದ ಕೊಡುಗೆ ಇದೆ ಎಂದು ಕುಟುಕಿದರು.

ಬಿಜೆಪಿ ನಾಯಕರ ಹುಚ್ಚು ಬಿಡಿಸಲು ಸ್ವತಃ ಕಾಂಗ್ರೆಸ್‌ ವೆಚ್ಚ ಭರಿಸಿ ಇಂಗ್ಲೆಂಡ್‌ನ ಬ್ರಾಡ್‌ಮೋರ್ ಆಸ್ಪತ್ರೆಗೆ ಸೇರಿಸುತ್ತೇವೆ. ಆರ್‌ಎಸ್‌ಎಸ್‌ ಮನಸ್ಥಿತಿಯವರಿಗೆ ಇಂಥಹ ವಿಷಯಗಳೇ ಸಿಗುವುದು. ಈ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಮುಖಂಡರು ದೇಶಕ್ಕಾಗಿ ಒಂದಾದರೂ ಒಳ್ಳೇ ಕೆಲಸ ಮಾಡಿದ್ದರೆ, ಸ್ವಾತಂತ್ರ ಸಂಗ್ರಾಮದಲ್ಲಿ ಆರ್‌ಎಸ್‌ಎಸ್‌ ಚಡ್ಡಿಗಳೇನಾದರೂ ಭಾಗವಹಿಸಿದ್ದರೆ ಆಗ ಹೇಳಲಿ. ಇಬ್ಬರು ಪ್ರಧಾನಿಗಳು ರಾಜೀವ್‌ ಹಾಗೂ ಇಂದಿರಾ ಗಾಂಧಿ ದೇಶಕ್ಕಾಗಿ ಬಲಿದಾನ ಮಾಡಿದವರು. ಅವರ ಬಗ್ಗೆ ಈ ತರಹ ಮಾತನಾಡುವುದು ಸರಿ ಅಲ್ಲ ಎಂದು ಗುಡುಗಿದರು.

Edited By : Vijay Kumar
PublicNext

PublicNext

19/08/2021 02:55 pm

Cinque Terre

63.43 K

Cinque Terre

25

ಸಂಬಂಧಿತ ಸುದ್ದಿ