ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಣೇಶೋತ್ಸವ ಆಚರಣೆಗೆ ನಿರ್ಬಂಧ: ಆಕ್ರೋಶ ವ್ಯಕ್ತಪಡಿಸಿದ ಪ್ರಮೋದ್ ಮುತಾಲೀಕ

ಬೆಳಗಾವಿ: ರಾಜ್ಯ ಸರ್ಕಾರ ಕೋವಿಡ್ ನೆಪ ಹೇಳುತ್ತಿದೆ, ಕೇವಲ ಹಿಂದೂ ದೇವಸ್ಥಾನಗಳಿಗೆ, ಆಚರಣೆಗಳಿಗೆ ನಿರ್ಬಂಧ ಹಾಕಲಾಗುತ್ತಿದೆ ಎಂದು ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ನಿರ್ಬಂಧ ವಿಚಾರವಾಗಿ ಶ್ರೀರಾಮ್ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲೀಕ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬುಧವಾರ ಕನ್ನಡ ಸಾಹಿತ್ಯ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಲಾ ಕಾಲೇಜುಗಳು, ಹೋಟೆಲ್, ಮಾರ್ಕೆಟ್ ಆರಂಭವಾಗಿವೆ ಕೇವಲ ಸಾರ್ವಜನಿಕ ಗಣೇಶೋತ್ಸವಕ್ಕೆ ಮಾತ್ರ ಯಾಕೆ ನಿರ್ಬಂಧ ಹೇರಲಾಗುತ್ತಿದೆ.‌ ಇದೊಂದು ಅವೈಜ್ಞಾನಿಕ ವಿಚಾರ, ಇದು ಅತ್ಯಂತ ಘೋರ, ಅಕ್ಷಮ್ಯ ಅಪರಾಧವಾಗಿದೆ. ಇದರ ವಿರುದ್ಧ ರಾಜ್ಯಾದ್ಯಂತ 21 ರಂದು ಪ್ರತಿಭಟನೆ ಮಾಡಲು ನಿಶ್ಚಯ ಮಾಡಲಾಗಿದೆ ಎಂದು ತಿಳಿಸಿದರು. ‌

ಕೋವಿಡ್ ನ ನೂರು ನಿಯಮ ಹಾಕಿದರು ಅದನ್ನು ಪಾಲಿಸುತ್ತೇವೆ ಆದರೆ ನಿರ್ಬಂಧ ಹೇರುವುದು ಸರಿಯಲ್ಲ. ಬಿಜೆಪಿ ಸರ್ಕಾರ ಜನಾ ಆಶೀರ್ವಾದ ಯಾತ್ರೆ ನಡೆಸುತ್ತಿದೆ, ಚುನಾವಣೆ ಘೋಷಣೆ ಮಾಡಿದ್ದಾರೆ. ಕೇವಲ ಹಿಂದೂ ಹಬ್ಬಗಳಿಗೆ ಮಾತ್ರ ನಿರ್ಬಂಧ ಹಾಕುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ‌

ರಾಜ್ಯದಲ್ಲಿ ಬಿಜೆಪಿ ಸರಕಾರ ಇದೆ ಶಾಸಕರು ಯಾಕೆ ಸುಮನ್ನೇ ಕುಳಿತ್ತಿದ್ದಾರೆ. ಅಧಿಕಾರ ಪಡೆದುಕೊಳ್ಳಲು ಹೊಡೆದಾಡುತ್ತೀರಿ. ಹಿಂದೂ, ಹಿಂದೂ ಎಂದು ಹೇಳುವರು ಯಾಕೆ ಸುಮ್ಮನಿದ್ದಾರೆಎಂದು ಬೆಳಗಾವಿಯಲ್ಲಿ ಶ್ರೀರಾಮ್ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲೀಕ ಅವರು ಪ್ರಶ್ನೆ ಮಾಡಿದ್ದಾರೆ

Edited By : Nagesh Gaonkar
PublicNext

PublicNext

18/08/2021 10:15 pm

Cinque Terre

134.63 K

Cinque Terre

25

ಸಂಬಂಧಿತ ಸುದ್ದಿ