ಮಂಡ್ಯ: ಅಕ್ರಮ ಗಣಿಗಾರಿಕೆ ವಿರುದ್ಧ ಛಲ ಬಿಡದ ಹೋರಾಟ ಮಾಡುತ್ತಿರುವ ಸಂಸದೆ ಸುಮಲತಾ ಹಾಗೂ ಶಾಸಕ ಶ್ರೀಕಂಠಯ್ಯ ನಡುವೆ ಸೈಲೆಂಟ್ ಸಮರ ಇನ್ನೂ ಮುಂದುವರೆದಿದೆ.
ಇಂದು ಮಂಡ್ಯ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ದಿಶಾ ಸಭೆ ನಡೆದಿತ್ತು. ಸಭೆ ಆರಂಭಕ್ಕೂ ಮುನ್ನವೇ ಕೋಲಾಹಲ ಎದ್ದಿದೆ. ಜಿಲ್ಲೆಯಲ್ಲಿ ಕಾನೂನುಬದ್ಧ ಗಣಿಗಾರಿಕೆ ಯಾಕೆ ನಿಲ್ಲಿಸಿದ್ದೀರಿ? ಹೆದ್ದಾರಿ ನಿರ್ಮಾಣ ಆದ್ರೆ ಸಾಕಾ? ಇನ್ನು ಬೇರೆ ಅಭಿವೃದ್ಧಿ ಕೆಲಸ ಆಗಬಾರದಾ? ಅಕ್ರಮದ ಹೆಸರಲ್ಲಿ ಸಕ್ರಮ ಗಣಿಗಾರಿಕೆ ಮಾಡುವವರಿಗೆ ಯಾಕೆ ತೊಂದರೆ ಕೊಡ್ತಿದ್ದೀರಿ? ಇದರಿಂದ ಕಾಮಗಾರಿ ನಡೆಸಲು ಕಟ್ಟಡ ಸಾಮಗ್ರಿ ಸಿಗುತ್ತಿಲ್ಲ ಎಂದು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಇದು ಜಿಲ್ಲಾ ಪಂಚಾಯತಿ ದಿಶಾ ಸಭೆ. ಈ ಸಭೆಗೆ ಸಂಸದರ ಆಪ್ತ ಕಾರ್ಯದರ್ಶಿ ಯಾಕೆ ಬಂದಿದ್ದಾರೆ? ಎಂದು ಸಿ.ಇ.ಒ ಅವರನ್ನು ಪ್ರಶ್ನೆ ಮಾಡಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಂಸದೆ ಸುಮಲತಾ ಚರ್ಚೆ ಮಾಡಲು ಬೇಕಾದಷ್ಟು ವಿಷಯ ಇದೆ. ಸಭೆ ಆರಂಭಕ್ಕೂ ಮುನ್ನ ಸುಮ್ಮನೇ ಪ್ರಶ್ನೆ ಮಾಡುತ್ತ ಕೂರುವುದು ಸರಿಯಲ್ಲ ಎಂದು ಗರಂ ಆಗಿದ್ದಾರೆ.
PublicNext
18/08/2021 06:55 pm