ಹುಬ್ಬಳ್ಳಿ: ಮಹಾನಗರದಿಂದ ಮೆಗಾ ಸಿಟಿಯತ್ತ ಎನ್ನುವ ಪ್ರಯತ್ನ ಮಾಡಿದ್ದೇವೆ. ಅಭಿವೃದ್ಧಿ ಹಣಕ್ಕಾಗಿ 120 ಕೋಟಿ ಹಣವನ್ನ ಕೇಳಿದ್ದೇವು. ಆದರೆ ಅವತ್ತು ಸಿದ್ದರಾಮಯ್ಯ ನಾನು ಬೆಂಗಳೂರಿಗೆ ಹೋಗಿ 120 ಕೋಟಿ ಅವರ ಮುಖಕ್ಕೆ ಎಸೆಯುತ್ತೇನೆ ಅಂತ ಹೇಳಿದ್ದರು. ಆದರೆ ಜನ ಮಾತ್ರ ಅವರನ್ನೇ ಕಿತ್ತೆಸೆದರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿಂದು ಆಯೋಜಿಸಲಾಗಿದ್ದ ಬಿಜೆಪಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಾರ್ಟಿ ಸತತವಾಗಿ ಸುಳ್ಳು ಹೇಳುತ್ತಾ ಬಂದಿದೆ. ಸಿ.ಆರ್.ಎಫ್ ಅನುದಾನದ ಬಗ್ಗೆ ಮಾತನಾಡಿದ್ದೇನೆ. ಇನ್ನೊಂದು 20 ದಿನಗಳ ಒಳಗಾಗಿ ಆ ಹಣವನ್ನ ತರಿಸುತ್ತೇವೆ. ಕಾಂಗ್ರೆಸ್ ನವರು ರೈಲು ಬಿಟ್ಟರು ನಾವು ವಿಮಾನ ಹಾರಿಸಿದ್ದೇವೆ ಎಂದು ಅವರು ಹೇಳಿದರು.
24/7 ಕುಡಿಯುವ ನೀರಿನ ವ್ಯವಸ್ಥೆ ಈಗಾಗಲೇ ಜಿಲ್ಲೆಯಲ್ಲಿ ಮಾಡಲಾಗುತ್ತಿದೆ. ಮೊದಲ ಬಾರಿಗೆ ಒಲಂಪಿಕ್ಸ್ ನಲ್ಲಿ ನಮಗೆ 7 ಪದಕ ಸಿಕ್ಕಿದೆ. ಮುಂದಿನ ಒಲಂಪಿಕ್ಸ್ ನಲ್ಲಿ ನಾವು ಮತ್ತಷ್ಟು ಪದಕಗಳನ್ನ ಗೆಲ್ಲುವ ವಿಶ್ವಾಸವಿದೆ ಎಂದ ಅವರು, ಈಗಾಗಲೇ 60 ಕೋಟಿ ಜನರಿಗೆ ವ್ಯಾಕ್ಸಿನೆಟ್ ಆಗಿದೆ. 10 ಇಂಗ್ಲೆಂಡ್ ಗಳಷ್ಟು ನಾವು ವ್ಯಾಕ್ಸಿನ್ ನೀಡಿದ್ದೇವೆ ಎಂದರು.
ಇನ್ನೂ 2024 ರ ವೇಳೆಗೆ ಭವ್ಯ ರಾಮಮಂದಿರ ದೇಶಕ್ಕೆ ಸಮರ್ಪಣೆಯಾಗಲಿದೆ. ಆದಷ್ಟು ಶೀಘ್ರದಲ್ಲೇ ಪಾಲಿಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ನಮ್ಮ ಪಕ್ಷ ಬಹಳ ದೊಡ್ಡ ಪಕ್ಷ. ಕಾಂಗ್ರೆಸ್ ಪಕ್ಷದವರು ಬರೆಯುವ ಓದುವ ಟೇಬಲ್ ಮೇಲೆ ಹತ್ತಿ ಕುಣಿದಾಡಿದರು.ರಾಹುಲ್ ಗಾಂಧಿಯೇ ಓದೋದಿಲ್ಲ ಅಂದ ಮೇಲೆ ಅವರು ಹೇಗೆ ಓದುತ್ತಾರೆ. ಕಾಂಗ್ರೆಸ್ ಪಕ್ಷದ ಸ್ಥಿತಿ ಬಹಳ ಭೀಕರವಾಗಿದೆ.ರಾಹುಲ್ ಗಾಂಧಿ ನೋಡಿ ನೋಡಿ ಸಾಕಾಗಿ ಹಲವಾರು ಜನ ಪಕ್ಷ ಬಿಡುತ್ತಿದ್ದಾರೆ. ಕಾಂಗ್ರೆಸ್ ಪಾರ್ಟಿ ಭೂತ ಕಾಲದ ಪಾರ್ಟಿ ಆದ್ರೆ ಬಿಜೆಪಿ ಪಕ್ಷ ಭವಿಷ್ಯದ ಪಾರ್ಟಿ ಎಂದು ಅವರು ಲೇವಡಿ ಮಾಡಿದರು.
PublicNext
17/08/2021 04:05 pm