ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಂ ಭೇಟಿಯಾದ ಸೈನಿಕ, ರಾಮದಾಸ್

ಬೆಂಗಳೂರು: ಖಾತೆ ಕ್ಯಾತೆ ಇನ್ನೂ ತಣ್ಣಗಾಗಿಲ್ಲ ತೆರೆಮರೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಕಸರತ್ತು ಮುಂದುವರೆದಿದೆ. ಸದ್ಯ ಸಿ.ಪಿ. ಯೋಗೇಶ್ವರ ಮತ್ತು ಎಸ್.ಎ. ರಾಮದಾಸ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ರಾಮದಾಸ್, 'ಮೈಸೂರಿಗೆ ಮುಖ್ಯಮಂತ್ರಿ ಬಂದಿದ್ದಾಗ ನಾನು ಅವರನ್ನು ಭೇಟಿ ಮಾಡಿರಲಿಲ್ಲ. ಯಾಕೆ ಭೇಟಿ ಮಾಡಿಲ್ಲ ಎಂಬ ಬಗ್ಗೆ ಮುಚ್ಚಿದ ಲಕೋಟೆಯಲ್ಲಿ ಪತ್ರದ ಮೂಲಕ ಕಾರಣ ಕೊಡುತ್ತೇನೆ ಅಂದಿದ್ದೆ. ಅದರಂತೆ, ಇವತ್ತು ಭೇಟಿ ಮಾಡಿ ಲಕೋಟೆ ಕೊಟ್ಟಿದ್ದೇನೆ' ಎಂದರು.

'ಪತ್ರದಲ್ಲಿ ಕೋವಿಡ್ ವಿಚಾರ, ರಾಜ್ಯ, ಸರ್ಕಾರದ ಹಿತದೃಷ್ಟಿಯಿಂದ ಅನುಭವಗಳನ್ನು ಹಂಚಿಕೊಂಡಿದ್ದೇನೆ. ಸಮಯ ಸಿಕ್ಕಿದಾಗ ಪತ್ರವನ್ನು ಓದುವಂತೆಯೂ ಮುಖ್ಯಮಂತ್ರಿಗೆ ಹೇಳಿದ್ದೇನೆ' ಮುಖ್ಯಮಂತ್ರಿಯಾಗಿರುವ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿಯ ಮಗ. ಹೀಗಾಗಿ ಪರಿಸ್ಥಿತಿಗಳು ಅವರಿಗೆ ಗೊತ್ತಿದೆ' ಎಂದರು.

ಯೋಗೇಶ್ವರ ಮಾತನಾಡಿ 'ನನಗೆ ಯಾವ ಅಸಮಾಧಾನವೂ ಇಲ್ಲ. ನಾನು ಪಕ್ಷದ ಕಾರ್ಯಕರ್ತ. ಕಾರ್ಯಕರ್ತನಾಗಿ ಇರುತ್ತೇನೆ' ಎಂದರು. 'ಮುಖ್ಯಮಂತ್ರಿ ಅವರನ್ನು ಈ ಹಿಂದೆಯೂ ಭೇಟಿ ಮಾಡಿದ್ದೆ. ಮಾಧ್ಯಮಗಳ ಮುಂದೆ ಈಗ ಬಂದಿದ್ದೇನೆ ಅಷ್ಟೇ. ಯಾವುದೇ ವಿಶೇಷ ಇಲ್ಲ' ಎಂದೂ ಹೇಳಿದರು.

Edited By : Nirmala Aralikatti
PublicNext

PublicNext

14/08/2021 07:40 pm

Cinque Terre

67.92 K

Cinque Terre

0

ಸಂಬಂಧಿತ ಸುದ್ದಿ