ವಿಜಯಪುರ: ಸಚಿವ ಆನಂದ್ ಸಿಂಗ್ ಒಬ್ಬ ಪ್ರಬುದ್ಧ ರಾಜಕಾರಣಿ. ಅವರನ್ನು ಪಕ್ಷದೊಳಗೆ ಗೌರವದಿಂದ ನಡೆಸಿಕೊಳ್ಳಬೇಕು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆನಂದ್ ಸಿಂಗ್ ಒಬ್ಬ ಕ್ರಿಯಾಶೀಲ ಹಾಗೂ ಉತ್ತಮ ವ್ಯಕ್ತಿ ಎಂದು ಹಾಡಿ ಹೊಗಳಿದ್ದಾರೆ.
ಇದು ನನ್ನ ವೈಯಕ್ತಿಕ ಅಭಿಪ್ರಾಯ. ಅವರಿಗೆ ಒಂದು ಒಳ್ಳೆಯ ಖಾತೆ ಕೊಟ್ಟರೆ ತಪ್ಪೇನಿಲ್ಲ. ಕೆಲಸ ಮಾಡುವವರಿಗೆ ಕೊಡಬೇಕು. ಅವರು ಅರಣ್ಯ ಇಲಾಖೆಯ ಸಚಿವರಿದ್ದಾಗ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಿಗೆ ಒಳ್ಳೆಯ ಖಾತೆ ಕೊಡುವುದು ಸೂಕ್ತ. ಬಿಜೆಪಿ ಸರ್ಕಾರ ಬರಬೇಕಾದರೆ ಮೊದಲು ರಾಜೀನಾಮೆ ಕೊಟ್ಟವರು ಆನಂದ್ ಸಿಂಗ್. ನನಗೆ ವಿಶ್ವಾಸ ಇದೆ ಹೈಕಮಾಂಡ್ ಅವರಿಗೆ ಸೂಕ್ತ ಸ್ಥಾನಮಾನ ನೀಡುತ್ತದೆ ಎಂದರು.
PublicNext
13/08/2021 05:42 pm