ಬೆಳಗಾವಿ: ಬಹಳ ವರ್ಷದಿಂದ ಬೆಳಗಾವಿ ಜಿಲ್ಲೆಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ ಹಾಗೂ ಮರಾಠಾ ಸಮುದಾಯಕ್ಕೆ ಸಚಿವ ಸ್ಥಾನ ನೀಡದ್ದಕ್ಕೆ ಬೆಳಗಾವಿ ಉತ್ತರ ಬಿ.ಜೆ.ಪಿ ಶಾಸಕ ಅನಿಲ್ ಬೆನಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ಮಾತನಾಡಿದ ಶಾಸಕ ಅನಿಲ್,ಶ್ರೀಮಂತ ಪಾಟೀಲ್‌ಗೆ ಸಚಿವ ಸ್ಥಾನ ನೀಡದಿದ್ರೆ ನನಗೆ ಸಚಿವ ಸ್ಥಾನ ಕೊಡಿ,ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ.
ನಾನು ಬಿಎ ಎಲ್‌ಎಲ್‌ಬಿ ರ‌್ಯಾಂಕ್ ಹೋಲ್ಡರ್ ಸಚಿವ ಸ್ಥಾನ ಕೊಟ್ರೆ ನಿಭಾಯಿಸುವಷ್ಟು ಸಾಮರ್ಥ್ಯ ನನ್ನಲ್ಲೂ ಇದೆ ಎಂದು ಹೇಳಿಕೊಂಡಿದ್ದಾರೆ.
ಮರಾಠಾ ಸಮುದಾಯಕ್ಕೆ ಮಂತ್ರಿ ಸ್ಥಾನ ನೀಡಲೇಬೇಕು,ಈಗಾಗಲೇ ಶ್ರೀಮಂತ ಪಾಟೀಲ್ ಮಂತ್ರಿ ಆಗಿದ್ದಾರೆ.ಈಗ ಅವರಿಗೆ ಮಂತ್ರಿ ಸ್ಥಾನ ಕೊಡದಿದ್ದರೇ ನನಗೆ ಮಂತ್ರಿ ಸ್ಥಾನ ನೀಡಬೇಕು,ಮರಾಠಾ ಸಮುದಾಯದ ಎರಡನೇ ಶಾಸಕ ನಾನೇ ಇರುವೆ ಮರಾಠ ಸಮುದಾಯವನ್ನು ಈ ಮೂಲಕ ಗುರುತಿಸುವ ಕೆಲಸವಾಗಬೇಕೆಂದರು.
ರಾಜ್ಯದಿಂದ ಏನು ನಿರ್ಣಯ ತೆಗೆದುಕೊಳ್ಳತ್ತಾರೆ ಅದಕ್ಕೆ ನಾನು ಬದ್ದನಾಗಿದ್ದು,ಶ್ರೀಮಂತ ಪಾಟೀಲ್ ಪಕ್ಷ ಬಿಟ್ಟು ಬಂದಿದ್ದಾರೆ ಅವರಿಗೆ ಮಂತ್ರಿ ಸ್ಥಾನ ಕೊಡಬಹುದು ಅಥವಾ ನನ್ನನ್ನು ಪರಿಗಣಿಸಬಹುದು ಒಂದುವೇಳೆ ಮಂತ್ರಿ ಸ್ಥಾನ ಕೊಡದಿದ್ದರು ಪರವಾಗಿಲ್ಲ ನಾವು ಒಗ್ಗಟ್ಟಾಗಿ ಕೆಲಸ ಮಾಡ್ತೀವಿ ಎಂದರು.
PublicNext
13/08/2021 04:21 pm