ಬೆಳಗಾವಿ: ಸಚಿವೆ ಶಶಿಕಲಾ ಜೊಲ್ಲೆ ಬಗ್ಗೆ ನನಗೆ ನೂರಕ್ಕೆ ನೂರರಷ್ಟು ವಿಶ್ವಾಸ ಇದೆ. ಅವರು ನಮ್ಮ ಸಿಸ್ಟರ್ ಇದ್ದ ಹಾಗೆ. ಭ್ರಷ್ಟಾಚಾರ ಸಂಬಂಧ ಒಂದೇ ಒಂದು ಕಪ್ಪುಚುಕ್ಕಿ ಕೂಡ ಅವರ ಮೇಲೆ ಇಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಯಾವುದೇ ವ್ಯಕ್ತಿ ಕೊಲೆ ಮಾಡಿ ಬಂದಿದ್ದರೂ ಕೂಡ ಆತನ ವಿರುದ್ಧ ತನಿಖೆ ಮಾಡಿ, ತೀರ್ಪು ಬಂದ ಮೇಲೆಯೇ ಶಿಕ್ಷೆ ಆಗೋದು. ಯಾರೋ ಒಬ್ಬರು ಬಂದರು, ಶಶಿಕಲಾ ಜೊಲ್ಲೆ ಜೊತೆ ಮಾತನಾಡಿದರು ಅಂದ ಮಾತ್ರಕ್ಕೆ ಅವರು ಭಷ್ಟ್ರಾಚಾರ ಆರೋಪ ಹೊತ್ತಿದ್ದಾರೆ, ಅವರ ರಾಜೀನಾಮೆ ಕೊಡಿಸಿ ಅನ್ನೋದು ತಪ್ಪು ಎಂದು ಹೇಳಿದರು.
PublicNext
11/08/2021 02:36 pm