ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂದು ಬಾರಿ‌ ಕ್ಷೇಮೆ ಕೇಳಿದ್ದೇನೆ ಅಲ್ವಾ.. ಮುಂಜಾನೆಯಿಂದ ಸಾಯಂಕಲವರಿಗೆ ಅದ್ನೆ ಮಾಡಲಾ: ಸಚಿವ ಕೆಎಸ್‌ ಈಶ್ವರಪ್ಪ

ಬೆಳಗಾವಿ: ಹಿಂದೆ ಭಾರತೀಯ ಜನಸಂಘ ಅಧ್ಯಕ್ಷ ದೀನದಯಾಳ ಉಪಾಧ್ಯ ಕಗ್ಗೊಲೆ ಆಯ್ತು. ಆಗ ನಮ್ಮ ಹತ್ತಿರ ಶಕ್ತಿ ಇರಲಿಲ್ಲ. ಆಗ ಇಡೀ ರಾಷ್ಟ್ರೀಯ ನಾಯಕರು ಶಾಂತಿಯಿಂದ ಇರೀ ಎಂದ್ರು. ಕೇರಳದಲ್ಲಿ ಆರ್‌ಎಸ್‌ಎಸ್ ಕಚೇರಿ ಮೇಲೆ ಅದೇ ರೀತಿ ದಾಳಿ ಮುಂದುವರಿಯಿತು. ಆಗ ನಮ್ಮ ಹಿರಿಯರು ಯಾವುದೇ ಕಾರಣಕ್ಕೂ ಸುಮ್ಮನಿರಬೇಡಿ ಎಂದ್ರು. ನೀವಾಗೆ ನೀವು ಯಾರನ್ನೂ ಹೊಡಿಬೇಡಿ, ನಿಮ್ಮ ಹೊಡೆದವರನ್ನು ಬಿಡಬೇಡಿ ಫೇಸ್ ವಿತ್ ಸೇಮ್ ಸ್ಟಿಕ್ ಅಂತಾ ಹೇಳಿದ್ರು. ಇದನ್ನು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ನಾನು ಹೇಳಿದ್ದು ಎಂದು ಕೆ.ಎಸ್.ಈಶ್ವರಪ್ಪ ಅವಾಚ್ಯ ಶಬ್ದ ಬಳಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ‌‌

ಮಂಗಳವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹರಿಪ್ರಸಾದ್ ನಾಗಪುರ ಯೂನಿವರ್ಸಿಟಿ ಹೇಳಿಕೊಟ್ಟಿದ್ದು ಅಂತಾ ಅವರದೇ ಪದ ಬಳಸಿದ್ರು. ಸುಲಭ ಶೌಚಾಲಯಗಳಿಗೆ ನರೇಂದ್ರ ಮೋದಿ ಹೆಸರಿಡಬೇಕು ಅಂತಾ ಹರಿಪ್ರಸಾದ್ ಅಂತಾ ವ್ಯಕ್ತಿ ಹೇಳಿದ್ಮೇಲೆ ನನಗೂ ಸಿಟ್ಟು ಬಂತು. ನಾನು ಹೇಳಿದ್ದು ಹೌದು, ಆ ಒಂದು ಪದ ಬಳಸಿದ್ದು ತಪ್ಪೇ.? ಸಿಟ್ಟಿನ ಭರದಲ್ಲಿ ಹೇಳಿ ಆ ಪದವನ್ನು ವಿತ್ ಡ್ರಾ ಮಾಡಿದ್ದೇನೆ. ನರೇಂದ್ರ ಮೋದಿ ಬಗ್ಗೆ ಸುಲಭ ಶೌಚಾಲಯಕ್ಕೆ ಹೆಸರಿಡಬೇಕು ಅಂತಾ ಹೇಳಿದ್ದು ಕಾಂಗ್ರೆಸ್ ನವರು ಒಪ್ತಾರಾ.? ಅದನ್ನೇ ಇಮೇಡಿಯೇಟ್ ಆಗಿ ಹೇಳಿದ್ದೇನೆ ಎಂದು ತಿಳಿಸಿದರು. ‌

ಪದ ಬಳಕೆಗೆ ಕ್ಷಮೆಯಾಚಿಸುತ್ತೀರಾ ಅಂತಾ ಮಾಧ್ಯಮಗಳ ಪ್ರಶ್ನೆ ಉತ್ತರಿಸಿದ ಅವರು ಒಂದ್ಸಾರಿ ಆಗಿ ಹೋಯ್ತಲ್ಲ.. ಬೆಳಗ್ಗೆಯಿಂದ ಸಂಜೆವರೆಗೂ ಅದೇ ಮಾಡಕ್ಕಾಗುತ್ತಾ? ಎಂದು ತಿಳಿಸಿದರು. ‌

Edited By : Nagesh Gaonkar
PublicNext

PublicNext

10/08/2021 09:17 pm

Cinque Terre

95.58 K

Cinque Terre

16

ಸಂಬಂಧಿತ ಸುದ್ದಿ