ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇಂದ್ರ ಸಚಿವ ತೋಮರ್‌ಗೆ ನೆರೆ ಸಂತ್ರಸ್ತರಿಂದ ಮುತ್ತಿಗೆ; ಡಿಸಿ, ಎಸ್‌ಪಿ ವರ್ಗಾವಣೆ

ಭೋಪಾಲ್‌: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಅವರಿಗೆ ಸ್ಥಳೀಯರು ಮುತ್ತಿಗೆ ಹಾಕಿದ ಘಟನೆ ನಡೆದ ಬೆನ್ನಲ್ಲೇ, ಶಿಯೋಪುರದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಮಧ್ಯಪ್ರದೇಶ ಸರ್ಕಾರವು ಭಾನುವಾರ ವರ್ಗಾವಣೆ ಮಾಡಿದೆ.

ಮಳೆ, ಪ್ರವಾಹದಿಂದ ಆಗಿರುವ ಹಾನಿಯನ್ನು ಪರಿಶೀಲಿಸಲು ಸಚಿವ ತೋಮರ್ ಅವರು ಶಿಯೋಪುರ ನಗರದ ಕರಾಟಿಯಾ ಬಜಾರ್‌ಗೆ ಶನಿವಾರ ಭೇಟಿ ನೀಡಿದ್ದರು. ಈ ವೇಳೆ 'ಸಚಿವರು ನಗರಕ್ಕೆ ತಡವಾಗಿ ಭೇಟಿ ನೀಡಿದ್ದಾರೆ' ಎಂದು ಉದ್ರಿಕ್ತರ ಗುಂಪೊಂದು ಆಕ್ರೋಶ ವ್ಯಕ್ರಪಡಿಸಿ, ಮುತ್ತಿಗೆ ಹಾಕಿತ್ತು. ಕೆಲವರು ಸಚಿವರ ಬೆಂಗಾವಲು ವಾಹನಗಳ ಮೇಲೆ ಮಣ್ಣು ಹಾಗೂ ಕಟ್ಟಿಗೆಗಳ ತುಂಡುಗಳನ್ನು ಎಸೆದಿದ್ದರು.

ಈ ಬೆನ್ನಲ್ಲೇ ಜಿಲ್ಲಾಧಿಕಾರಿ ರಾಕೇಶ್ ಶ್ರೀವಾಸ್ತವ ಅವರನ್ನು ಸಚಿವಾಲಯದ ಉಪಕಾರ್ಯದರ್ಶಿಯನ್ನಾಗಿ, ಎಸ್‌ಪಿ ಸಂಪತ್‌ ಉಪಾಧ್ಯಾಯ ಅವರನ್ನು ಪೊಲೀಸ್‌ ಇಲಾಖೆಯ ಎಐಜಿಯಾಗಿ ವರ್ಗಾವಣೆ ಮಾಡಲಾಗಿದೆ.

Edited By : Vijay Kumar
PublicNext

PublicNext

08/08/2021 02:57 pm

Cinque Terre

50.26 K

Cinque Terre

2

ಸಂಬಂಧಿತ ಸುದ್ದಿ