ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಎಸ್‌ವೈ ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ ರೇಣುಕಾಚಾರ್ಯ, ಸಂತೋಷ್‌ಗೆ ಶಾಕ್.!

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಆಡಳಿತದಲ್ಲಿ ನೇಮಕಗೊಂಡಿದ್ದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸೇರಿ 10 ಹುದ್ದೆಗಳನ್ನು ರದ್ದುಪಡಿಸಲಾಗಿದೆ.

ಮುಖ್ಯಮಂತ್ರಿ ಕಾನೂನು ಸಲಹೆಗಾರರು, ಸಿಎಂ ರಾಜಕೀಯ ಕಾರ್ಯದರ್ಶಿ, ಆಡಳಿತ ಸಲಹೆಗಾರರು ಮತ್ತು ನೀತಿ ನಿರೂಪಣೆ ಸಲಹೆಗಾರರನ್ನು ಸಹ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ. ಪ್ರಮುಖವಾಗಿ ಬಿ.ಎಸ್.ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿಗಳಾಗಿದ್ದ ಎಂಪಿ ರೇಣುಕಾಚಾರ್ಯ, ಡಿ.ಎನ್ ಜೀವರಾಜ್ ಹಾಗೂ ಎನ್.ಆರ್ ಸಂತೋಷ್ ಅವರನ್ನು ಬೊಮ್ಮಾಯಿ ಸರ್ಕಾರ ಸೇವೆಯಿಂದ ಬಿಡುಗಡೆ ಮಾಡಿ ಇಂದು (ಮಂಗಳವಾರ) ಆದೇಶ ಹೊರಡಿಸಿದೆ.

ಶಿಕ್ಷಣ ಸುಧಾರಣಾ ಸಲಹೆಗಾರ ಪ್ರೊ.ಎಂ.ಆರ್.ದೊರೆಸ್ವಾಮಿ, ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್, ಯಡಿಯೂರಪ್ಪ ಕಾನೂನು ಸಲಹೆಗಾರರಾಗಿದ್ದ ಮೋಹನ್ ಲಿಂಬಿಕಾಯಿ, ಮಾಧ್ಯಮ ಸಲಹೆಗಾರ ಎನ್. ಭೃಂಗೇಶ್, ಸಿಎಂ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ್, ಮಾಧ್ಯಮ ಸಂಯೋಜಕ ಜಿ.ಎಸ್. ಸುನೀಲ್, ಸಿಎಂ ನೀತಿ ನಿರೂಪಣೆ ಕಾರ್ಯತಂತ್ರ ಸಲಹೆಗಾರ ಪ್ರಶಾಂತ್ ಅವರ ಹುದ್ದೆಗಳನ್ನು ರದ್ದುಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ.

Edited By : Vijay Kumar
PublicNext

PublicNext

03/08/2021 11:04 pm

Cinque Terre

55.92 K

Cinque Terre

2

ಸಂಬಂಧಿತ ಸುದ್ದಿ