ಬೆಂಗಳೂರು: ಬಸವರಾಜ್ ಬೊಮ್ಮಾಯಿ ಸಿಎಂ ಹುದ್ದೆಗೇರಿದ್ದೇ ತಡ. ಮಂತ್ರಿ ಸ್ಥಾನಕ್ಕಾಗಿ ಹಲವಾರು ಆಕಾಂಕ್ಷಿಗಳು ರೇಸ್ ನಲ್ಲಿದ್ದಾರೆ. ಇತ್ತ ನಾಳೆ ಬೆಳಿಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಬೆಳಿಗ್ಗೆ 9ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಬಿಜೆಪಿ ಅಧ್ಯಕ್ಷ ನಡ್ಡಾ ಭೇಟಿಯಾಗಿ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸೋ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ ಮೊದಲ ಭೇಟಿಯಲ್ಲೇ ಸಂಪುಟ ರಚನೆಗೆ ಒಪ್ಪಿಗೆ ನೀಡೋ ಸಾಧ್ಯತೆ ಕಡಿಮೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿರೋ ಸಿಎಂ ಬೊಮ್ಮಾಯಿ, 2-3 ದಿನ ಆದ ಬಳಿಕ ಮತ್ತೆ ದೆಹಲಿಗೆ ಹೋಗ್ತೇನೆ. ಆಗ ಸಂಪುಟ ರಚನೆ ಬಗ್ಗೆ ಚರ್ಚೆ ಮಾಡ್ತೇನೆ ಅಂತ ಹೇಳಿದ್ದಾರೆ.
PublicNext
29/07/2021 10:46 pm