ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಉತ್ತರ ಕರ್ನಾಟಕ ಬಹುಬೇಡಿಕೆಗಳು ಈಡೇರುತ್ತಾ? ಹುಬ್ಬಳ್ಳಿ ಹೂಬಳ್ಳಿ ಮಾಡ್ತಾರಾ! ನೂತನ ಸಿಎಮ್ ?

ವರದಿ: ಈರಣ್ಣ ವಾಲಿಕಾರ,

ಪಬ್ಲಿಕ್ ನೆಕ್ಸ್ಟ್

ಹುಬ್ಬಳ್ಳಿ: ಉತ್ತರ ಕರ್ನಾಟಕದ ಭಾಗದ ಗಂಡು ಮಟ್ಟಿನ ನಾಡು ಹುಬ್ಬಳ್ಳಿ ನಾಯಕ, ಈಗ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ, ಇನ್ನು ಅವರ ಮೇಲೆ ಅಪಾರ ನಂಬಿಕೆ ಇಟ್ಟ ಹುಬ್ಬಳ್ಳಿ ಜನತೆ, ಇಲ್ಲಿನ ಸಮಸ್ಯೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ, ಅಷ್ಟಕ್ಕೂ ಅವರ ಬೇಡಿಕೆ ಏನು ಎಂಬುದನ್ನಾ ತೋರಸ್ತೇವಿ ನೋಡಿ!

ಹುಬ್ಬಳ್ಳಿ ಮಗ ಧಿಂಮತ ನಾಯಕ ರಾಜ್ಯವನ್ನು ಆಳುತ್ತಿದ್ದಾರೆ, ಆ ನಾಯಕನಿಗೆ ಧಾರವಾಡ ಜಿಲ್ಲೆಯ ಜಲ್ವಂತ ಸಮಸ್ಯೆಗಳ ಬಗ್ಗೆ ಹುಬ್ಬಳ್ಳಿ ಜನತೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇನ್ನು ಹೊರ ರಾಜ್ಯ ಮತ್ತು ಬೇರೆ ಜಿಲ್ಲೆಯಿಂದ ಜನರು ಬಂದರೆ ಧೂಳು ತಿನ್ನುವ ಸಂಗತಿ, ಅಷ್ಟೇ ಅಲ್ಲದೆ, ಹಲವಾರು ಅವ್ಯವಸ್ಥೆಗಳು, ಮಂದಗತಿಯಿಂದ ಸಾಗುತ್ತಿರುವ ಕಾಮಾಗಾರಿ, ಅಷ್ಟೇ ಅಲ್ಲದೆ ಸ್ಮಾರ್ಟ್ ಆಗಬೇಕಿದ್ದ ಹುಬ್ಬಳ್ಳಿ ಧಾರವಾಡ ಕಾಮಗಾರಿ ಅಪೂರ್ಣವಾಗಿದೆ. ಇಷ್ಟೆಲ್ಲಾ ಸಮಸ್ಯೆಗಳನ್ನು ಹೊತ್ತಿರುವ ಧಾರವಾಡ ಜಿಲ್ಲೆಗೆ ನೂತನ ಸಿಎಮ್ ಬಸವರಾಜ ಬೊಮ್ಮಾಯಿ ವಿಶೇಷ ಅನುದಾನ ನೀಡಲಿ ಎಂದು ಹುಬ್ಬಳ್ಳಿ ಜನತೆ ಒತ್ತಾಯಿಸಿದ್ದಾರೆ.

ಆದ್ದರಿಂದ ನೂತನ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿ ಧಾರವಾಡ ಅಭಿವೃದ್ಧಿ ಮಾಡಿ, ಜನರ ಸಂಕಷ್ಟ ದೂರ ಮಾಡಬೇಕೆಂಬುದು ಇಲ್ಲಿನ ಜನರ ಬೇಡಿಕೆಯಾಗಿದೆ.

Edited By : Manjunath H D
PublicNext

PublicNext

29/07/2021 05:35 pm

Cinque Terre

192.5 K

Cinque Terre

9

ಸಂಬಂಧಿತ ಸುದ್ದಿ