ಬೆಂಗಳೂರು: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಸಚಿವ ಸಂಪುಟ ರಚನೆ ಹಾಗೂ ಉಪ ಮುಖ್ಯಮಂತ್ರಿ ಆಯ್ಕೆಯ ಕಸರತ್ತು ಶುರುವಾಗಿದೆ.
ಬೊಮ್ಮಾಯಿ ಅವರ ಕ್ಯಾಬಿನೆಟ್‌ನಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಬಣಕ್ಕೆ ಸಿಂಹಪಾಲು ನೀಡಲಾಗುತ್ತಾ ಎಂಬ ಪ್ರಶ್ನೆ ಶುರುವಾಗಿದೆ. ಆದರೆ ಸಂಪುಟ ರಚನೆ ಸಂಪೂರ್ಣ ಹೈಕಮಾಂಡ್ ನಿರ್ಧಾರದಂತೆ ನಡೆಯಲಿದೆ ಎನ್ನಲಾಗಿದೆ. ಇತ್ತ ಹೊಸ ಮುಖಗಳಿಗೆ ಮಣೆ ಹಾಕುವ ಹಿನ್ನೆಲೆ ವಲಸಿಗ ಮಾಜಿ ಸಚಿವರಿಗೆ ಟೆನ್ಷನ್ ಶುರುವಾಗಿದೆ.
ಬೊಮ್ಮಾಯಿ ಸಂಪುಟ ಸೇರಲಿರುವ ಸಂಭಾವ್ಯ ಸಚಿವರು ಪಟ್ಟಿ ಹೀಗಿದೆ:
ಆರ್. ಅಶೋಕ್, ಶ್ರೀರಾಮುಲು, ಗೋವಿಂದ ಕಾರ್ಜೋಳ, ಅರವಿಂದ್ ಲಿಂಬಾವಳಿ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ಪೂರ್ಣಿಮಾ ಶ್ರೀನಿವಾಸ್, ಸಿ.ಪಿ.ಯೋಗೇಶ್ವರ್, ಉಮೇಶ್ ಕತ್ತಿ, ಆನಂದ್ ಸಿಂಗ್, ಮಾಧುಸ್ವಾಮಿ, ಸುರೇಶ್ ಕುಮಾರ್, ಅಶ್ವಥ್ ನಾರಾಯಣ, ಮುರುಗೇಶ್ ನಿರಾಣಿ, ಸುನಿಲ್ ಕುಮಾರ್, ಡಾ.ಕೆ.ಸುಧಾಕರ್, ಎಸ್.ಟಿ. ಸೋಮಶೇಖರ್, ಎಸ್.ಎಸ್. ಅಂಗಾರ, ಚಂದ್ರಪ್ಪ, ಪಿರಾಜೀವ್, ದತ್ತಾತ್ರೇಯ ಪಾಟೀಲ್ ರೇವೂರ, ಕುಮಾರ್ ಬಂಗಾರಪ್ಪ, ಬಾಲಚಂದ್ರ ಜಾರಕಿಹೊಳಿ, ರಾಜುಗೌಡ, ಶಿವನಗೌಡನಾಯಕ್.
ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಿ.ಪಿ.ಯೋಗೇಶ್ವರ್ ಅವರ ಆಯ್ಕೆಗೆ ಬಿಎಸ್ ಯಡಿಯೂರಪ್ಪ ಅವರು ವಿರೋಧ ವ್ಯಕ್ತಪಡಿಸಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
PublicNext
29/07/2021 08:07 am