ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಯಸಿದ್ದೆ. ಅದು ಇಂದು ಈಡೇರಿದೆ. ಸಿಎಂ ಬದಲಾವಣೆ ಆಗಿದ್ದರಿಂದಲೇ ಗಡ್ಡ ತೆಗೆದಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಿನ್ನೆ (ಮಂಗಳವಾರ) ಶಾಸಕಾಂಗ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾವು ಹೇಳಿದಂತೆ ಸಿಎಂ ಬದಲಾವಣೆ ಆಗಿದೆ. ಯಾರು ಎಂಬುದು ಇಲ್ಲಿ ಮುಖ್ಯವಲ್ಲ. ಬಸವರಾಜ ಬೊಮ್ಮಾಯಿ ಬಿಜೆಪಿ ಹೈಕಮಾಂಡ್‌ನ ಸರ್ವಸಮ್ಮತದ ಆಯ್ಕೆ. ಅವರನ್ನೇ ಸಿಎಂ ಮಾಡಬೇಕು ಅಂತ ಹೈಕಮಾಂಡ್ ಸೂಚನೆ ನೀಡಿತ್ತು. ನಾವು ಎಲ್ಲ ಶಾಸಕರು ಬೊಮ್ಮಾಯಿ ಅವರ ಆಯ್ಕೆಯನ್ನು ಒಪ್ಪಿಕೊಂಡಿದ್ದೇವೆ" ಎಂದು ಹೇಳಿದರು.
ಇದೇ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಕಿಡಿ ಕಾರಿದ ಯತ್ನಾಳ್, "ಯಾವುದೇ ಒಬ್ಬ ನಾಯಕನನ್ನು ಸಂಪೂರ್ಣವಾಗಿ ವಿರೋಧ ಹಾಕಿಕೊಳ್ಳಬಾರದು ಎಂದು ಹೈಕಮಾಂಡ್ ಅಂದುಕೊಂಡಿರಬಹುದು. ಹಾಗಾಗಿಯೇ ಅವರ ಆಪ್ತನನ್ನು ಸೂಚಿಸಿರಬಹುದು. ಇಲ್ಲಿ ಯಡಿಯೂರಪ್ಪನವರ ಶಕ್ತಿ ಪ್ರದರ್ಶನವಾಗಿಲ್ಲ. ನಾಯಕತ್ವವೇ ಬದಲು ಮಾಡಿದ ನಂತರ ಸಹಮತದ ನಾಯಕ ಇರಲಿ ಅಂತ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ" ಎಂದರು.
PublicNext
28/07/2021 07:31 am