ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯತ್ನಾಳ ಪರ ಮಾತನಾಡಿದ ಈಶ್ವರಪ್ಪ

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಿಂದುತ್ವದ ಪ್ರಮುಖ ಶಕ್ತಿ. ಸಿಎಂ ಯಡ್ಡಿಯೂರಪ್ಪ ಹಾಗೂ ಮಗ ವಿಜಯೇಂದ್ರನ ಮೇಲಿರುವ ಆರೋಪಗಳ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಲಿ. ಅದು ಬಿಟ್ಟು ಮಾಧ್ಯಮಗಳ ಮುಂದೆ ಸಾರ್ವಜನಿಕವಾಗಿ ಮಾತನಾಡಬೇಡಿ ಎಂದು ಹೇಳಿದ್ದೀನಿ ಎಂದು ಪರೋಕ್ಷವಾಗಿ ಯತ್ನಾಳ್ ಪರ ಸಚಿವ ಕೆ.ಎಸ್.ಈಶ್ವರಪ್ಪ ಬ್ಯಾಟ್ ಬೀಸಿದರು.

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಮ್ಮ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲ ಇಲಾಖೆಗಳು ನಿರೀಕ್ಷೆ ಮೀರಿ ಕೆಲಸ ಮಾಡುತ್ತಿವೆ. ಮೀಸಲಾತಿ ಹೋರಾಟವನ್ನ ನಾನು ಸ್ವಾಗತ ಮಾಡ್ತೀನಿ. ಗೋವಿನ ಶಾಪದಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ರಾಮನ ಶಾಪದಿಂದ ಕಾಂಗ್ರೆಸ್ ನವರ ಅಡ್ರೆಸ್ ಇರಲ್ಲ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

Edited By : Nagaraj Tulugeri
PublicNext

PublicNext

25/02/2021 03:07 pm

Cinque Terre

69.71 K

Cinque Terre

2

ಸಂಬಂಧಿತ ಸುದ್ದಿ