ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾದಾಮಿಯಲ್ಲಿ ಜಮೀನು ನೀಡುವೆ, ರಾಮ ಮಂದಿರ ನಿರ್ಮಿಸಿ ತೋರಿಸಿ: ಸಿದ್ದರಾಮಯ್ಯಗೆ ಪುರಸಭಾ ಸದಸ್ಯ ಸವಾಲ್

ಬಾಗಲಕೋಟೆ: ರಾಮ ಮಂದಿರ ನಿರ್ಮಾಣದ ವಿಚಾರವಾಗಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಾದಾಮಿಯ ಬಿಜೆಪಿ ಪುರಸಭಾ ಸದಸ್ಯ ಸವಾಲು ಹಾಕಿದ್ದಾರೆ.

ಹೌದು. ಬಾದಾಮಿ ಪಟ್ಟಣದ ಬಿಜೆಪಿ ಪುರಸಭಾ ಸದಸ್ಯ ಬಸವರಾಜ್ ಗೊರಕೊಪ್ಪನವರ್ ಅವರು ಟ್ವೀಟ್ ಮೂಲಕ ಚಾಲೆಂಜ್ ಮಾಡಿದ್ದಾರೆ. ''ಸಿದ್ದರಾಮಯ್ಯನವರೇ, ನಾನು ಮಿನಿ ರಾಮ ಮಂದಿರ ನಿರ್ಮಾಣಕ್ಕಾಗಿ ತಮ್ಮ (ಬಾದಾಮಿ) ಸ್ವಕ್ಷೇತ್ರದಲ್ಲಿಯೇ, ಒಂದು ಕೋಟಿ ಬೆಲೆಬಾಳುವ ಜಮೀನನ್ನು ದೇಣಿಗೆ ಕೊಡಲು ಸಿದ್ಧನಿದ್ದೇನೆ. ನೀವು ಇಲ್ಲಿ ರಾಮ ಮಂದಿರ ಕಟ್ಟಿಸಿ ತೋರಿಸಿ. ನಿಮಗಿದು ನನ್ನ ನಮ್ರ ಸವಾಲ್‌'' ಎಂದು ಹೇಳಿದ್ದಾರೆ.

ಬಾದಾಮಿ ಬಳಿಯ ಬನಶಂಕರಿ ರಸ್ತೆಯ ಪಕ್ಕದಲ್ಲಿ ಬಸವರಾಜ್ ಗೊರಕೊಪ್ಪನವರ್ 9 ಎಕರೆ ಜಮೀನು ಇದ್ದು, ಅದರಲ್ಲಿ 1 ಎಕರೆ ಜಮೀನನ್ನು ಮಿನಿ ರಾಮ ಮಂದಿರಕ್ಕಾಗಿ ದೇಣಿಗೆ ಕೊಡಲು ವಾಗ್ದಾನ ನೀಡಿದ್ದಾರೆ. ಅಲ್ಲದೇ ರಾಮ ಮಂದಿರ ಕಟ್ಟಲು ತಾಯಿ ಬನಶಂಕರಿ ದೇವಿ ಮೇಲೆ ಆಣೆ ಮಾಡಿರುವ ಬಸವರಾಜ್ 1 ಎಕರೆ ಜಮೀನು ಕೊಡ್ತೀನಿ ಎಂದು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

20/02/2021 05:24 pm

Cinque Terre

154.47 K

Cinque Terre

59

ಸಂಬಂಧಿತ ಸುದ್ದಿ