ಮಡಿಕೇರಿ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಗೋಮಾಂಸ ತಿನ್ನುವುದಾದರೆ ನನ್ನ ಎದುರಿಗೆ ತಿನ್ನಲಿ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ ಚವ್ಹಾಣ್ ಸವಾಲು ಎಸೆದಿದ್ದಾರೆ.
ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಆಹಾರ ನನ್ನ ಹಕ್ಕು, ತಿನ್ನಬೇಕು ಎನಿಸಿದರೆ ಗೋಮಾಂಸವನ್ನು ನಾನು ತಿನ್ನುತ್ತೇನೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ತಿನ್ನುವುದಾದರೆ ಗೋಮಾಂಸ ಕೊಡಿಸೋಣ. ಆದರೆ ನನ್ನ ಎದುರಿಗೆ ತಿಂದು ತೋರಿಸಲಿ ಎಂದು ಚಾಲೆಂಜ್ ಹಾಕಿದರು.
ವಿರೋಧ ಪಕ್ಷದಲ್ಲಿ ಇದ್ದೇವೆ ಅಂತ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅವರ ಮನೆಯಲ್ಲಿ ಗೋವುಗಳಿಲ್ಲವೆ? ಅವರ ಮನೆಯಲ್ಲಿ ಮೇಕೆ ಕುರಿಗಳಿಲ್ಲವೆ? ತಿನ್ನಬೇಕು ಅನಿಸಿದರೆ ಗೋಮಾಂಸ ತಿನ್ನುತ್ತೇನೆ ಎಂದು ಹೇಳುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
PublicNext
16/02/2021 06:32 pm